*ಗೋಣಿಕೊಪ್ಪಲು, ಜ. 25: ಕುಂದ ಗ್ರಾಮದ ನಾಡುಗುಂಡಿ ಸಮೀಪ ಸೆರೆಯಾದ ಕಾಳಿಂಗ ಸರ್ಪವನ್ನು ಅತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಂತ ಅನ್ನಮ್ಮ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರದರ್ಶಿಸಿ ಮಾಕುಟ್ಟ ಕಾಡಿಗೆ ಬಿಡಲಾಯಿತು. ಸ್ನೇಕ್ ಶರತ್ ಹಾಗೂ ಬಾವೆ ನಾಡುಗುಂಡಿ ನಿವಾಸಿ ತಾತಿರ ದೇವಯ್ಯ ಅವರ ಮನೆಯ ಛಾವಣಿಯಲ್ಲಿ ಕಂಡು ಬಂದ ಬೃಹತ್ ಗಾತ್ರದ 7 ಕೆ.ಜಿ ಹಾಗೂ 10 ಅಡಿ ಉದ್ದದ ಗಂಡು ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸಿದರು.

ಎನ್.ಎಸ್.ಎಸ್. ಶಿಬಿರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳು ಶಾಲೆಯ ಆವರಣವನ್ನು ಮತ್ತು ಊರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಮಾಡುವ ಮೂಲಕ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸೇವೆಯನ್ನು ಸಾರಿದರು.

3ನೇ ದಿನದ ಕಾರ್ಯಕ್ರಮದಲ್ಲಿ ಆರೋಗ್ಯ ಸೌಭಾಗ್ಯ ಸಾರ್ವಜನಿಕರಿಗೆ ಉಚಿತ ದಂತ ಪರೀಕ್ಷೆ ಹಾಗೂ ಚಿಕಿತ್ಸೆ, ವೀರಾಜಪೇಟೆ ದಂತ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ನಡೆಯಿತು. ಲೋಪಾಮುದ್ರ ದೃಷ್ಠಿ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗೆ ಉಚಿತ ಕಣ್ಣಿನ ಪರೀಕ್ಷೆ ನಡೆಯಿತು.

ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪರಿಕಲ್ಪನೆ, ಮನಸ್ಸೇ ಮಾನಸಿಕ ಆರೋಗ್ಯ ಕುರಿತು ಸಂವಾದ, ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಎಂ.ಎಸ್. ಪೂಣಚ್ಚ ಅವರಿಂದ ದ್ವಜಾರೋಹಣ ನಡೆಯಿತು. ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಅಮೃತ್ ನಾಣಯ್ಯ ವಹಿಸಿದ್ದು, ಅತಿಥಿಗಳಾಗಿ ಬ್ರಿಗೇಡಿಯರ್ ಸಿ.ಬಿ. ಪೊನ್ನಪ್ಪ, ಸಂಪನ್ಮೂಲ ವ್ಯಕ್ತಿಯಾಗಿ ಡಾ. ಪ್ರದೀಪ್ ಕುಮಾರ್, ಮಾನಸಿಕ ತಜ್ಞ ಡಾ. ನವೀನ್ ರೈ ಚುಕ್ಕ, ಯೋಜನಾ ಧಿಕಾರಿ ಅರ್ಜುನ್ ಹಾಜರಿದ್ದರು. ಸಾಂಸ್ಕøತಿಕ ಕಾರ್ಯಕ್ರಮವನ್ನು ಕಾಫಿ ಬೆಳಗಾರ ಕಡೇಮಾಡ ಚೇತನ್ ಉದ್ಘಾಟಿಸಿದರು. ಸಂತ ಅನ್ನಮ್ಮ ಪದವಿಪೂರ್ವ ಕಾಲೇಜು ಉಪನ್ಯಾಸಕ ವಿವೇಕ್, ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿ ವರ್ಷ ಉಪಸ್ಥಿತರಿದ್ದರು.