ಕೂಡಿಗೆ, ಜ. 4: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ವಿಭಾಗದ 2016-17ನೇ ಸಾಲಿನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಹಾಗೂ ಆದರ್ಶ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಶಿರಂಗಾಲ ಕಾಲೇಜು ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹೆಚ್ಚಾಗಲು ಸ್ಥಳೀಯ ವಾತಾವರಣ ಸಹಕಾರಿಯಾಗುತ್ತದೆ. ಅಲ್ಲದೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯ ಜೊತೆಯಲ್ಲಿ ಶಾರೀರಿಕ ಬೆಳವಣಿಗೆಗೆ ಅನುಕೂಲವಾಗುವ ರೀತಿಯಲ್ಲಿ ತಮ್ಮ ಮುಂದಿನ ಭವಿಷ್ಯವನ್ನು ರೂಢಿಸಿ ಕೊಳ್ಳಲು ಇಂತಹ ಸಮಾರಂಭಗಳು ಅನುಕೂಲವಾಗುತ್ತವೆ ಎಂದರು.
ಮುಖ್ಯ ಭಾಷಣಾಗಾರರಾಗಿ ಮಡಿಕೇರಿ ಸರಸ್ವತಿ ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಕ್ರೀಡಾ ಸಾಧನೆ ಮತ್ತು ಸಾಂಸ್ಕøತಿಕ ಸಾಧನೆ ಮಾಡುವದು ಒಂದೆಡೆ ಯಾದರೆ, ಮುಂದಿನ ಜೀವನದ ಗುರಿಯನ್ನು ಬೆನ್ನಟ್ಟಲು ಉನ್ನತ ವ್ಯಾಸಂಗಗಳಾದ ಐ.ಎ.ಎಸ್., ಕೆ.ಎ.ಎಸ್. ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪಿ.ಯು.ಸಿ. ಹಂತದಲ್ಲೇ ಸಿದ್ಧತೆಯಲ್ಲಿ ತನ್ನ ದೃಢತೆಯನ್ನು ಸರಿದೂಗಿಸಿಕೊಳ್ಳಲು ಸನ್ನದ್ಧರಾಗಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಬಿ. ಮಹೇಶ್ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಎನ್.ಎಸ್. ರಮೇಶ್, ಎಸ್.ಜಿ. ಸುಚಿತ್ರ ಬಾಯಿ, ಎಸ್.ಹೆಚ್. ಮಂಜುನಾಥ್, ಎಸ್.ಎನ್. ವೀರಪ್ಪ ಶಾಸ್ತ್ರಿ, ಎಸ್.ಎಲ್. ತಮ್ಮಯ್ಯ, ಮಂಟಿಗಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಸಿ.ಎನ್. ಲೋಕೇಶ್, ಕಾಲೇಜಿನ ಪ್ರಾಂಶುಪಾಲ ಎಂ.ಆರ್. ಸುರೇಶ್ ಕುಮಾರ್, ಹಿರಿಯ ಸಹ ಶಿಕ್ಷಕ ಸೋಮಯ್ಯ ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರತಿಭಾ ಪುರಸ್ಕಾರಗಳು ನಡೆದವು.
ಈ ಸಂದರ್ಭ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಾಲೇಜು ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟರು.