ಗೋಣಿಕೊಪ್ಪಲು, ನ. 13: ತಿತಿಮತಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕೊಠಡಿಯನ್ನು ಯೋಜನೆ ಮತ್ತು ಸಾಂಖ್ಯಿಕ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಮತ್ತು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಜೆ.ಎ. ಕರುಂಬಯ್ಯ ಅವರುಗಳು ಇತ್ತೀಚೆಗೆ ಜಂಟಿಯಾಗಿ ಉದ್ಘಾಟಿಸಿದರು.ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಕೊಡಗು ನಿರ್ಮಿತಿ ಕೇಂದ್ರದ ಅಸಮರ್ಪಕ ಕಾಮಗಾರಿ, ಅವ್ಯವಹಾರದಿಂದಾಗಿ ನಿಂತು ಹೋಗಿತ್ತು.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಾಮಗಾರಿಯನ್ನು ಸುಳ್ಯದ ಹರ್ಷಿ ಇನ್ಫ್ರಾಸ್ಟ್ರಕ್ಚರ್ ಕಂಪೆನಿಗೆ ಸುಮಾರು ರೂ. 54.60 ಲಕ್ಷ ವೆಚ್ಚದ ಕಾಮಗಾರಿಗೆ ಗುತ್ತಿಗೆ ನೀಡಿದ್ದು ಇದೀಗ ಬಾಲಕಿಯರ ಉಪಯೋಗಕ್ಕೆ ಸಿದ್ಧಗೊಂಡಿತ್ತು.
ಗುತ್ತಿಗೆದಾರರಾದ ಜೀವನ್, ಸತ್ಯ, ತುಳಸಿ ಹಾಗೂ ಸಿಬ್ಬಂದಿಗಳು ಗುಣಮಟ್ಟದಲ್ಲಿ ಕಾಮಗಾರಿ ಸಿದ್ಧಪಡಿಸಿರುವದಾಗಿ ಜಿಲ್ಲಾಧಿಕಾರಿ ಆರ್.ವಿ. ಡಿಸೋಜಾ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಚೆನ್ನಯ್ಯನ ಕೋಟೆ ಗ್ರಾ.ಪಂ. ವ್ಯಾಪ್ತಿಯ ಬಸವನ ಹಳ್ಳಿ ಆಶ್ರಮ ಶಾಲೆಯ ಪಾಕ ಶಾಲೆ, ಊಟದ ಕೊಠಡಿ, ಶೌಚಾಲಯ, ಸ್ನಾನದ ಗೃಹವನ್ನು ಸುಮಾರು ರೂ. 37.40 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಯೋಜನಾ ವ್ಯವಸ್ಥಾಪಕ ಸಚಿನ್ ಹಾಗೂ ಸಹಾಯಕ ಅಭಿಯಂತರ ಮೂರ್ನಾಡುವಿನ ಶಶಾಂತ್ ಉಸ್ತುವಾರಿಯಲ್ಲಿ ನಿರ್ಮಾಣ ವಾಗಿದ್ದು, ತಿತಿಮತಿಯಲ್ಲಿ ಉದ್ಘಾಟನಾ ಫಲಕವನ್ನು ಉಸ್ತುವಾರಿ ಸಚಿವ ಸೀತಾರಾಮ್ ಅನಾವರಣಗೊಳಿಸಿದರು. ಇದೇ ಸಂದರ್ಭ ತಿತಿಮತಿ ವಸತಿ ನಿಲಯದ ಬಾಲಕಿಯರೊಂದಿಗೆ ಸಂವಾದ ನಡೆಸಿದ ಸಚಿವರು, ಕೊಠಡಿಗಳನ್ನು ವೀಕ್ಷಣೆ ಮಾಡಿದರು. ಕಾರ್ಯಕ್ರಮ ದಲ್ಲಿ ಪ್ರಬಾರ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಮಾಯಾ ಗಲಗಲಿ, ತಿತಿಮತಿ ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ, ಬಾಳೆಲೆ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ಸಿದ್ದಾಪುರ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ, ಚೆನ್ನಯ್ಯನಕೋಟೆ ಜಿ.ಪಂ. ಸದಸ್ಯೆ ಲೀಲಾ, ಪೆÇನ್ನಂಪೇಟೆ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ತಿತಿಮತಿ ತಾ.ಪಂ. ಸದಸ್ಯೆ ಆಶಾ ಜೇಮ್ಸ್, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಮಾಜಿ ಎಂ.ಎಲ್.ಸಿ ಅರುಣ್ ಮಾಚಯ್ಯ, ಕಾಂಗ್ರೆಸ್ ಹಿರಿಯರಾದ ಮಿಟ್ಟು ಚಂಗಪ್ಪ, ಬಿ.ಟಿ. ಪ್ರದೀಪ್, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಉಸ್ತುವಾರಿ ಸಚಿವರ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ವೀರಾಜಪೇಟೆ ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಾದ ರೋಹಿತ್, ನವೀನ್, ತಿತಿಮತಿ-ದೇವರಪುರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ್ ಕುಮಾರ್, ವೀರಾಜಪೇಟೆ ತಹಶೀಲ್ದಾರ್ ಮಹದೇವಸ್ವಾಮಿ, ತಾ.ಪಂ. ಇಓ ಫಡ್ನೇಕರ್ ಮುಂತಾದವರು ಉಪಸ್ಥಿತರಿದ್ದರು.
- ಟಿ.ಎಲ್.ಎಸ್.