ಮಡಿಕೇರಿ ಸೆ.23 : ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ 2015-16 ನೇ ಸಾಲಿನಲ್ಲಿ 20.50 ಕೋಟಿ ರೂ. ವ್ಯವಹಾರ ನಡೆಸಿ 20.51 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಿರುವ ಸಹಕಾರಿಯಲ್ಲಿ ರೂ. 2 ಕೋಟಿಗೂ ಹೆಚ್ಚು ಷೇರು ಬಂಡವಾಳವಿದ್ದು, ಸುಮಾರು ರೂ. 8.72 ಕೋಟಿಯಷ್ಟು ಸಾಲ ನೀಡಲಾಗಿದೆ ಎಂದರು. 8.90 ಕೋಟಿ ರೂ. ಠೇವಣಿ ಸಂಗ್ರಹಣೆ ಮಾಡಲಾಗಿದ್ದು, ಸ್ವಂತ ಬಂಡವಾಳದ ಮೇಲೆ ವ್ಯವಹಾರ ನಡೆಸುತ್ತಿರುವ ಸಹಕಾರಿ ನಗರದ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದೆ.

ಸದಸ್ಯರು ಮೃತ ಪಟ್ಟರೆ, ಅವರ ವಾರಸುದಾರರಿಗೆ ರೂ. 15 ಸಾವಿರ ಮರಣ ಪರಿಹಾರ ಧನ ನೀಡಲಾಗುತ್ತಿದೆ. ಸದಸ್ಯರಿಂದ ನಿರಖು ಠೇವಣಿಯನ್ನು ಸಂಗ್ರಹಿಸಿ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತಿದೆ. ಪ್ರಸ್ತುತ ಸಾಮಾನ್ಯ ಸದಸ್ಯರಿಗೆ ಶೇ.9, ಹಿರಿಯ ಸದಸ್ಯರಿಗೆ ಶೇ.9.75 ಬಡ್ಡಿಯನ್ನು ನೀಡಲಾಗುತ್ತಿದೆ.

ನಾಳೆ ಮಹಾಸಭೆ

ಸಹಕಾರಿಯ ವಾರ್ಷಿಕ ಮಹಾಸಭೆಯನ್ನು ಸೆ.25 ರಂದು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆಸಲಾಗುತ್ತಿದೆ. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಹಿರಿಯ ಸದಸ್ಯರನ್ನು ಸಭೆಯಲ್ಲಿ ಸನ್ಮಾನಿಸಲಾಗುವದೆಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಡಿ.ಬಿ. ಸೋಮಪ್ಪ, ನಿರ್ದೇಶಕರಾದ ರೇವತಿ ರಮೇಶ್, ಹೆಚ್.ಆರ್. ಮುತ್ತಮ್ಮ, ಹೆಚ್.ಆರ್. ಮುತ್ತಪ್ಪ, ಇಂದ್ರಾವತಿ, ಎ.ಶ್ರೀಧರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಮುತ್ತಮ್ಮ ಉಪಸ್ಥಿತರಿದ್ದರು.