ಮಡಿಕೇರಿ, ಸೆ. 27: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಇತರ ಇಲಾಖೆಗಳಲ್ಲಿನ ಶೇ. 3 ರ ಅನುದಾನದಡಿ ಹಾಗೂ ಶಾಸಕರು, ಲೋಕಸಭಾ, ರಾಜ್ಯ ಸಭಾ ಸದಸ್ಯರುಗಳ ಅನುದಾನದಡಿ ಈಗಾಗಲೇ ಅರ್ಹ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಗಿರುತ್ತದೆ.

ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲ್ಪಟ್ಟ ಎಲ್ಲಾ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಈ ವರ್ಷದ ಅಂತ್ಯದೊಳಗೆ ವಿತರಿಸಲು ಯೋಜನೆ ರೂಪಿಸಲಾಗುತ್ತಿದ್ದು, ಇದರಲ್ಲಿ ಸಾದಾ ತ್ರಿಚಕ್ರವಾಹನ, ಗಾಲಿ ಕುರ್ಚಿ, ಕಂಕುಳ ದೊಣ್ಣೆ. ಎಲ್ಬೋ ಕ್ರಚಸ್, ಕ್ಯಾಲಿಫರ್, ಕೃತಕ ಕೈ, ಕೃತಕ ಕಾಲು, ಸ್ಪೈನಲ್ ಬ್ರೆಸ್, ವಾಕರ್, ವಾಕಿಂಗ್ ಸ್ಟಿಕ್. ರೊಲೇಟರ್, ಟ್ರೈವೀಲರ್, ಸರ್ಜಿಕಲ್ ಪಾದರಕ್ಷೆ, ಸಿ.ಪಿ. ಚೇರ್, ಕಾರ್ನರ್ ಚೇರ್, ಎಂ.ಆರ್.ಕಿಟ್, ಎರ್ ಬೆಡ್, ವಾಟರ್ ಬೆಡ್, ವೈಟ್ ಕೇನ್. ಬ್ರೈಲ್ ವಾಚ್, ಬ್ರೈಲ್ ಕಿಟ್, 2.ಲೋ ವಿಷನ್ ಉಪಕರಣ, ಶ್ರವಣೋಪಕರಣ ಸಾಧನ ಸಲಕರಣೆಗಳು ಲಭ್ಯವಿರುತ್ತದೆ.

ಈ ಸಾಧನ ಸಲಕರಣೆಗಳ ಅವಶ್ಯಕತೆ ಇರುವ ಜಿಲ್ಲೆಯ 3 ತಾಲೂಕಿನ ವಿಕಲಚೇತನರು 3 ದಿನಗಳೊಳಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆಯ ವಿಕಲಚೇತನರ ಸಹಾಯವಾಣಿಯ ದೂರವಾಣಿ ಸಂ.08272-222830ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.