ಗೋಣಿಕೊಪ್ಪಲು, ನ. 30: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಯುವಜನ ಸೇವಾ ಹಾಗೂ ಕ್ರೀಡಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯ ದಲ್ಲಿ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ತಾಲೂಕು ಮಟ್ಟದ ವಿಕಲಚೇತನರ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆ ನಡೆಯಿತು.

ದೇವರಪುರದ ಅಮೃತವಾಣಿ ಮತ್ತು ಪಾಲಿಬೆಟ್ಟದ ಚೆಷೈರ್ ಹೋಮ್‍ನ 50 ಕ್ಕೂ ಹೆಚ್ಚಿನ ವಿಕಲಚೇತನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮೆರುಗು ನೀಡಿದರು.

ಕಪ್ಪೆ ಜಿಗಿತ, 50 ಮೀ ನಡಿಗೆ, 100 ಮೀಟರ್ ಓಟ, ಮ್ಯೂಸಿಕ್ ಥ್ರೆಡ್, ಲಕ್ಕಿ ನಂಬರ್, ಲೆಮನ್ ಅಂಡ್ ಸ್ಪೂನ್, ಪೆನ್ಸಿಲ್ ಬ್ಯಾಲೆನ್ಸಿಂಗ್, ಹಾಡುಗಾರಿಕೆ, ಮಡಿಕೆ ಹೊಡೆಯುವದು, ಬಾಲ್ ಟು ಬಕೆಟ್, ಬಾಂಬ್ ಇನ್ ದಿ ಸಿಟಿ ಎಂಬ 14 ವಿಭಾಗಗಳಲ್ಲಿ ಸ್ಪರ್ಧೆ ನಡೆದವು.

ತಾಲೂಕು ಪಂಚಾಯಿ ಉಪಾಧ್ಯಕ್ಷ ನೆಲ್ಲೀರ ಚಲನ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಜಯ ಪೂವಯ್ಯ, ಗ್ರಾ.ಪಂ ಅಧ್ಯಕ್ಷೆ ಸೆಲ್ವಿ, ಸದಸ್ಯೆ ನೂರೇರ ರತಿ ಅಚ್ಚಪ್ಪ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಜಗದೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದ, ಜೆಸಿಐ ಪೊನ್ನಂಪೇಟೆ ನಿಸರ್ಗದ ಅಧ್ಯಕ್ಷ ಕಿರಣ್, ಕಾರ್ಯದರ್ಶಿ ಸತೀಶ್ ಸಿಂಗಿ ಉಪಸ್ಥಿತರಿದ್ದರು.

ಮಹಿಳಾ ಸಮಾಜದ ಅಧ್ಯಕ್ಷೆ ಸುಮಿ ಸುಬ್ಬಯ್ಯ ಸಿಹಿ ಮತ್ತು ಉಡುಗೂರೆಯನ್ನು ನೀಡುವ ಮೂಲಕ ವಿಕಲಚೇತನರಿಗೆ ಪ್ರೋತ್ಸಾಹ ನೀಡಿದರು.