ಮಡಿಕೇರಿ, ಜು. 21: ಕಣ್ಣಂಗಾಲ ಗ್ರಾ.ಪಂ. ವ್ಯಾಪ್ತಿಯಲ್ಲಿ ‘ನಮ್ಮ ಗ್ರಾಮ ನಮ್ಮ ಯೋಜನೆ' (ಅಭಿವೃದ್ಧಿ ಮುನ್ನೋಟ) ವರದಿಯನ್ನು ತಯಾರಿಸುವ ಸಲುವಾಗಿ ಪೂರ್ವಾಹ್ನ 10.30 ಗಂಟೆಯಿಂದ ಎಡೂರು ಮತ್ತು ಹಚ್ಚಿನಾಡು ವಾರ್ಡ್‍ಗಳ ವಾರ್ಡ್ ಸಭೆ ಹಚ್ಚಿನಾಡು ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಎಡೂರು ವಾರ್ಡಿನ ಸದಸ್ಯ ಪಿ.ಎಂ. ಸೋಮಯ್ಯ ಮತ್ತು ಹಚ್ಚಿನಾಡು ವಾರ್ಡ್‍ನ ಸದಸ್ಯೆ ಎಂ.ವಿ. ರುಕ್ಮಿಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ತಾ. 23ರಂದು ಕಣ್ಣಂಗಾಲ ಭಾಗ- 02ರ ವಾರ್ಡ್ ಸಭೆ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಉಪಾಧ್ಯಕ್ಷ ವಿ.ಎನ್. ಮನೋಜ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 10.30ಕ್ಕೆ ಏರ್ಪಡಿಸಲಾಗಿದೆ. ಕಣ್ಣಂಗಾಲ ಭಾಗ-01ರ ವಾರ್ಡ್‍ಸಭೆ ವಾರ್ಡ್‍ನ ಸದಸ್ಯೆ ಜೆ.ಜಯ ಅವರ ಅಧ್ಯಕ್ಷತೆಯಲ್ಲಿ ಚಾಮುಂಡಿ ಪೈಸಾರಿಯ ಸಮುದಾಯ ಭವನದಲ್ಲಿ ಅಪರಾಹ್ನ 1 ಗಂಟೆಗೆ ನಡೆಯಲಿದೆ.