ನಾಪೆÇೀಕ್ಲು, ಸೆ. 10: ಸಮೀಪದ ಕಕ್ಕಬೆ ವಸತಿ ಶಾಲೆಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಭೇಟಿ ನೀಡಿದರು. ಈ ಸಂದರ್ಭ ಮಕ್ಕಳ ಹಾಜರಾತಿ, ಕುಂದು-ಕೊರತೆಗಳ ಬಗ್ಗೆ ಶಿಕ್ಷಕಿ ಸುಮಯ ಅವರಿಂದ ಮಾಹಿತಿ ಪಡೆದರು. ಈ ಸಂದರ್ಭ ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಗ್ರಾಮಸ್ಥರಾದ ಪಾಂಡಂಡ ನರೇಶ್, ಗ್ರಾಮ ಲೆಕ್ಕಾಧಿಕಾರಿ ಶರ್ಮಿಳಾ ಮತ್ತಿತರರಿದ್ದರು.