ಮಡಿಕೇರಿ, ಆ. 9: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಎನ್ಸಿ ಜಿಲ್ಲಾಡಳಿತ ಮುಂಭಾಗ ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇ ಸತ್ಯಾಗ್ರಹ ಹಮ್ಮಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ದೇಶದಲ್ಲಿ ಅಸ್ತಿತ್ವದಲ್ಲಿರುವ ಏಳು ಕೇಂದ್ರಾಡಳಿತ ಪ್ರದೇಶಗಳ ಮಾದರಿಯಲ್ಲಿಯೇ ಕೊಡವಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸ್ಥಾಪನೆಯಾಗ ಬೇಕು. ಭಾಷಾ ಅಲ್ಪಸಂಖ್ಯಾತ ರಾಗಿರುವ ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕು, ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ಗೆ ಸೇರಿಸಬೇಕು, ಕೊಡವರಿಗೆ ವಿಶೇಷ ಭದ್ರತೆ, ದೇವಟ್ ಪರಂಬ್ನಲ್ಲಿ ರಾಷ್ಟ್ರೀಯ ಸ್ಮಾರಕ, ಜಮ್ಮಾ ಹಿಡುವಳಿದಾರರ ಬಂದೂಕಿನ ವಿಶೇಷ ರಿಯಾಯಿತಿ ಹಕ್ಕನ್ನು ಅಬಾಧಿತವಾಗಿ ಮುಂದುವರೆಸಬೇಕು ಎಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಚರಣಿ ಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶರೀನ್, ಕಲಿಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬೇಪಡಿಯಂಡ ದಿನು, ಚಂಬಂಡ ಜನತ್, ಅರೆಯಡ ಗಿರೀಶ್, ಮಂದಪಂಡ ಮನೋಜ್, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ದೇವಯ್ಯ, ಪುಲ್ಲೆರ ಕಾಳಪ್ಪ, ಮಣವಟ್ಟಿರ ಶಿವಣಿ, ಮಣವಟ್ಟಿರ ಸ್ವರೂಪ್, ಮಣವಟ್ಟಿರ ನಂದ, ಕೂಪದಿರ ಸಾಬು, ಮೊಣ್ಣಂಡ ಕಾರ್ಯಪ್ಪ, ಬಲ್ಲಚಂಡ ಟಿಟ್ಟು, ಬಾಚಮಂಡ ಬೆಲ್ಲು, ಅಳಮಂಡ ಜೈ, ಕಾಟುಮಣಿಯಂಡ ಉಮೇಶ್, ಪಟ್ಟಮಾಡ ಕುಶ, ಬೊಟ್ಟೋಳಂಡ ರನ್ನ ಮುಂತಾದವರು
ಭಾಗವಹಿಸಿದ್ದರು.