ಸುಂಟಿಕೊಪ್ಪ, ಆ. 11: ಸ್ವಜಾತಿ ಬಂಧುಗಳನ್ನು ಒಗ್ಗೂಡಿ ತಮ್ಮೊಳಗೆ ಅಡಗಿರುವ ಕ್ರೀಡಾಭಿಮಾನ ಹಾಗೂ ಕಲೆಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಮಾಜದ ವತಿಯಿಂದ ಜಿಲ್ಲಾ ಮಟ್ಟದ ಕೋಟಿ-ಚೆನ್ನಯ್ಯ ಬಿಲ್ಲವ ಕ್ರೀಡಾ ಕೂಟವನ್ನು ಆಯೋಜಿಸಲಾಗುತ್ತದೆ ಎಂದು ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ವೈ. ಆನಂದ ರಘು ತಿಳಿಸಿದರು.

ಇಲ್ಲಿನ ಬಿಲ್ಲವ ಸಮಾಜದ ಕಚೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಮಾಜ ಮತ್ತು ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸುಂಟಿಕೊಪ್ಪ ಬಿಲ್ಲವ ಸಂಘಕ್ಕೆ ಈ ವರ್ಷದ ಈ ಕ್ರೀಡಾಕೂಟದ ಆಯೋಜನೆಯ ಉಸ್ತುವಾರಿಯನ್ನು ನೀಡಲಾಗಿದ್ದು, ವರ್ಷದ ಕೊನೆಯಲ್ಲಿ ಕ್ರೀಡಾಕೂಟವನ್ನು ಸಂಘಟಿಸಲಾಗುವದು ಎಂದರು.

ಜಿಲ್ಲಾ ಬಿಲ್ಲವ ಸಮಾಜದ ಸಹ ಕಾರ್ಯದರ್ಶಿ ಜೋಯಪ್ಪ ಮಾತನಾಡಿ, ಕ್ರೀಡಾಕೂಟ ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ ಮುಖ್ಯ ಎಂದರು.

ಬಿಲ್ಲವ ಸೇವಾ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಂಗೇರಾ, ಸಮಿತಿಯ ಗೌರವಾಧ್ಯಕ್ಷ ಬಿ.ಎನ್. ಪೂವಪ್ಪ, ಸುಂಟಿಕೊಪ್ಪ ಬಿಲ್ಲವ ಸಂಘದ ಹಿರಿಯರಾದ ಬಿ.ಬಿ. ಮೋಣಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಇಲ್ಲಿನ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮಣಿಮುಖೇಶ್ ವಹಿಸಿದ್ದರು.

ಸಭೆಯಲ್ಲಿ ಕುಶಾಲನಗರ ಹೋಬಳಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಪೊನ್ನಪ್ಪ ಪೂಜಾರಿ, ಜಿಲ್ಲಾ ಸಮಿತಿಯ ಬಾಲಕೃಷ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇವತಿ, ಸುಂಟಿಕೊಪ್ಪ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ವೆಂಕಪ್ಪ ಪೂಜಾರಿ, ಉಪಾಧ್ಯಕ್ಷ ಬಿ.ಟಿ. ರಮೇಶ್ ಪೂಜಾರಿ, ಸತೀಶ್ ಪೂಜಾರಿ, ಸಹಕಾರ್ಯದರ್ಶಿ ಹರೀಶ್ ಪೂಜಾರಿ ಇನ್ನಿತರರು ಇದ್ದರು.