*ಗೋಣಿಕೊಪ್ಪಲು, ಸೆ. 21: ವೀರನಾಡು ವಾರ ಪತ್ರಿಕೆಯ ಮಾಜಿ ಸಂಪಾದಕ ಅಡ್ಡಂಡ ಕಾರ್ಯಪ್ಪನವರಿಗೆ 7 ದಿವಸ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿ ಪೊನ್ನಂಪೇಟೆ ನ್ಯಾಯಾಲಯ ತೀರ್ಪು ನೀಡಿದೆ.
2013ರಲ್ಲಿ ವೀರನಾಡು ವಾರಪತ್ರಿಕೆಯಲ್ಲಿ ಅರ್ವತ್ತೋಕ್ಲು ಮಾಜಿ ಸದಸ್ಯ ಫಿಲಿಫೋಸ್ ಮಾಥ್ಯು ವಿರುದ್ಧ ಮತಾಂತರ ಆರೋಪ ಮಾಡಿ ಸುದ್ದಿ ಪ್ರಕಟಗೊಂಡಿತ್ತು. ಪೊನ್ನಂಪೇಟೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಫಿಲಿಪೋಸ್ ಮ್ಯಾಥ್ಯು ಪೊನ್ನಂಪೇಟೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಸುದೀರ್ಘ 3 ವರ್ಷಗಳ ಕಾಲ ನಡೆದ ಈ ಪ್ರಕರಣದಲ್ಲಿ ಇದೀಗ ಕಾರ್ಯಪ್ಪ ಅವರಿಗೆ ಪೊನ್ನಂಪೇಟೆ ನ್ಯಾಯಾಧೀಶÀ ಮೋಹನ್ ಗೌಡ ಅವರು 7 ದಿನಗಳ ಕಾಲ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸುವಂತೆ ತೀರ್ಪು ನೀಡಿದ್ದಾರೆ. ಮ್ಯಾಥ್ಯು ಪರ ಸುನೀಲ್ ಹಾಗೂ ರೆಹಮ್ಮದ್ ವಾದ ಮಂಡಿಸಿದರು.