ವೀರಾಜಪೇಟೆ, ಜ. 16: ಇಂಡಿಯನ್ ಮಿಲಿಟರಿ ಅಕಾಡೆಮಿಯ ಡೆಹರಾಡೂನ್ನಲ್ಲಿ ಇತ್ತೀಚೆಗೆ ನಡೆದ ಪಾಸಿಂಗ್ ಜೌಟ್ ಪೆರೇಡ್ನಲ್ಲಿ ವೀರಾಜಪೇಟೆ ಕೆದಮುಳ್ಳೂರು ಗ್ರಾಮದ ಮಾಳೇಟಿರ ಮುತ್ತಪ್ಪ ಎಂಬ ಯುವಕ ಲೆಫ್ಟಿನೆಂಟ್ ಹುದ್ದೆಗೆ ಏರಿದ್ದಾನೆ. 12 ತಿಂಗಳ ತರಬೇತಿ ನಂತರ ಡಿಸೆಂಬರ್ನಲ್ಲಿ ಲೆಫ್ಟಿನೆಂಟ್ ಪದವಿ ಅಲಂಕರಿಸಿದ್ದಾರೆ.ವೀರಾಜಪೇಟೆ ಕೆದಮುಳ್ಳೂರು ಗ್ರಾಮದ ಮಾಳೇಟಿರ ರತ್ನ ಸುಬ್ಬಯ್ಯ - ಉಷಾ ದಂಪತಿಗಳ ಪುತ್ರ ಮುತ್ತಪ್ಪ ಚಿಕ್ಕಮಂಗಳೂರಿನ ಎಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಮುಗಿಸಿ ಒಂದೂವರೆ ವರ್ಷದ ಹಿಂದೆ ಸೇನೆಗೆ ಸೇರಿದ್ದರು.