ಶ್ರೀಮಂಗಲ, ಸೆ. 23: 2015-16ನೇ ಸಾಲಿನಲ್ಲಿ ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಿವಿಧ ಬಾಬಿನಲ್ಲಿ ರೂ. 33.33 ಲಕ್ಷ ಲಾಭಗಳಿಸಿರುವದಾಗಿ ಸಂಘದ ಅಧ್ಯಕ್ಷ ತಡಿಯಂಗಡ ಬಿ. ಕರುಂಬಯ್ಯ ತಿಳಿಸಿದರು.

ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2015-16ನೇ ಸಾಲಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2015-16ನೇ ಸಾಲಿನಲ್ಲಿ ಸಂಘ ರೂ. 25.10 ಕೋಟಿ ವಹಿವಾಟು ನಡೆಸಿದ್ದು, ರೂ. 33.33 ಲಕ್ಷ ಲಾಭಗಳಿಸಿದೆ. ಸಂಘದಲ್ಲಿ 2810 ಸದಸ್ಯರಿದ್ದು, ರೂ. 1.10 ಕೋಟಿಯಷ್ಟು ಪಾಲು ಬಂಡವಾಳ, ರೂ. 14.15 ಕೋಟಿ ಠೇವಣಿ ಹೊಂದಿದೆ. ರೂ. 2 ಕೋಟಿ ಗೊಬ್ಬರ ವ್ಯಾಪಾರ ಹಾಗೂ ನ್ಯಾಯಬೆಲೆ ಅಂಗಡಿ ವ್ಯಾಪಾರದಿಂದ ರೂ. 10.70 ಲಕ್ಷ ವ್ಯಾಪಾರ ಲಾಭ ಗಳಿಸಿದೆ.

ಸಂಘದ ಮುಖಾಂತರ ಕೃಷಿ ಸಾಲ ರೂ. 10.14 ಕೋಟಿ ಮತ್ತು ಕೃಷಿಯೇತರ ಸಾಲ ರೂ. 8.13 ಕೋಟಿ ಸೇರಿದಂತೆ ರೂ. 18.27 ಕೋಟಿ ವಿತರಿಸಿ ಎಲ್ಲಾ ವರ್ಗದ ಸದಸ್ಯರಿಗೆ ಆರ್ಥಿಕ ನೆರವು ನೀಡಲಾಗಿದೆ. ಸಂಘದಲ್ಲಿ 55 ಸ್ವಸಹಾಯ ಗುಂಪು, 8 ಜೆ.ಎಲ್.ಜಿ. ಗುಂಪು, 4 ಎಸ್.ಜಿ.ಎಸ್.ವೈ. ಗುಂಪುಗಳನ್ನು ಹೊಂದಿದ್ದು, ಅವುಗಳಿಗೆ ಒಟ್ಟು ರೂ. 1.17 ಕೋಟಿ ಸಾಲ ನೀಡಲಾಗಿದೆ ಎಂದು ತಿಳಿಸಿದರು.

ಸಂಘದಲ್ಲಿ ಮರಣ ನಿಧಿ ಸೌಲಭ್ಯ ಹೊಂದಿದ್ದು, ಸದಸ್ಯರಾದವರು ರೂ. 5,000 ಪಾವತಿಸಿದರೆ ಅವರ ಮರಣದ ನಂತರ ರೂ. 25,000 ಪಾವತಿಸುವಂತೆ ಬೈಲಾ ತಿದ್ದುಪಡಿ ಮಾಡಲು ಮಹಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭ ಸಂಘದ ಸದಸ್ಯರಾದವರ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ತರಗತಿಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಮಹಾಸಭೆಯಲ್ಲಿ ವಿತರಿಸಲಾಯಿತು.

ಎಸ್.ಎಸ್.ಎಲ್.ಸಿ. ವಿಭಾಗದಲ್ಲಿ ಕುಮಾರಿ ದೇಕಮಾಡ ಎಂ. ಲೀತ ಪ್ರಥಮ, ಕುಮಾರ ಪಿ.ಎಲ್. ಸಂಪತ್ ಕುಮಾರ್ ದ್ವಿತೀಯ, ಕುಮಾರ ಮಾನೀರ ಎನ್. ಅಯ್ಯಪ್ಪ ತೃತೀಯ, ಪಿ.ಯು.ಸಿ. ವಿಭಾಗದಲ್ಲಿ ಕುಮಾರಿ ಪಿ.ಎಲ್. ಸಂಪ್ರೀತ ಪ್ರಥಮ, ಚೊಟ್ಟೆಯಂಡಮಾಡ ಎ. ಸಮರ್ಥ್ ದ್ವಿತೀಯ, ಕುಂಞಂಗಡ ಎಲ್. ಚರೀಷ್ಮಳಿಗೆ ತೃತೀಯ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಸಂಘದ ಅಧ್ಯಕ್ಷ ತಡಿಯಂಗಡ ಬಿ. ಕರುಂಬಯ್ಯ, ಉಪಾಧ್ಯಕ್ಷ ಮಚ್ಚಮಾಡ ಎನ್. ಸುಮಂತ್, ನಿರ್ದೇಶಕರಾದ ಕುಂಞಂಗಡ ಬಿ. ಕೃಷ್ಣ, ಚೊಟ್ಟೆಯಂಡಮಾಡ ವಿಶು ರಂಜಿ, ತೀತೀರ ಸೋಮಣ್ಣ, ಮಚ್ಚಮಾಡ ಯು. ಮುತ್ತಪ್ಪ, ಮಚ್ಚಮಾಡ ಸಜು ನಾಚಪ್ಪ, ಉಳುವಂಗಡ ಪಿ. ಸರೋಜ, ಚಟ್ಟಂಡ್ರ ಯು. ರಾಣಿ, ಹೆಚ್.ಆರ್. ಗಣೇಶ್, ಮಾಣೀರ ಕೆ. ದಿಲೀಪ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಿ.ಎಸ್. ಸೀತಮ್ಮ, ಅಕೌಂಟೆಂಟ್ ಕೆ.ಎಸ್. ದೇವಯ್ಯ ಉಪಸ್ಥಿತರಿದ್ದರು. ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಚೊಟ್ಟೆಯಂಡಮಾಡ ವಿಶು ರಂಜಿ ಸ್ವಾಗತಿಸಿ, ಮಚ್ಚಮಾಡ ಎನ್. ಸುಮಂತ್ ವಂದಿಸಿದರು.