ಚೆಟ್ಟಳ್ಳಿ, ಜು. 26: ರ್ಯಾಲಿ ಆಫ್ ಕೊಯಂಬತ್ತೂರ್-2016ಕ್ಕೆ ಕೊಡಗಿನಿಂದ ತೆರಳಿದ್ದ ರ್ಯಾಲಿ ಪಟುಗಳಾದ ಕೊಂಗೇಟಿರ ಬೋಪಯ್ಯ, ಕೊಂಗಂಡ ಕರುಂಬಯ್ಯ ಅವರು ಎರಡನೇಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊಯಂಬತ್ತೂರಿನಲ್ಲಿ ಮೇ 23 ಹಾಗೂ 24 ರಂದು ನಡೆದ ಫಸ್ಟ್ ರೌಂಡ್ ಆಫ್ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್‍ನ ಓಸ್ವೇಗನ್ ಪೋಲೊ 2000 ಕಪ್ ಕ್ಲಾಸ್‍ನಲ್ಲಿ ಕೊಂಗೇಟಿರ ಬೋಪಯ್ಯ (ಡ್ರೈವರ್) ಹಾಗೂ ಕೊಂಗಂಡ ಕರುಂಬಯ್ಯ (ನ್ಯಾವಿಗೇಟರ್) ಭಾಗವಹಿಸಿ ಎರಡನೆ ಹಾಗೂ ಐಎನ್‍ಆರ್ ಓವರಾಲ್ ಕ್ಲಾಸ್ 4ನೇ ಸ್ಥಾನವನ್ನು ಗಳಿಸಿದ್ದಾರೆ. ರ್ಯಾಲಿಯಲ್ಲಿ ಭಾರತದ ವಿವಿಧ ಕಡೆಯಿಂದ ಒಟ್ಟು 39 ರ್ಯಾಲಿ ಪಟುಗಳು ಭಾಗವಹಿಸಿದ್ದರು.
- ಪುತ್ತರಿರ ಕರುಣ್ ಕಾಳಯ್ಯ