ಮಡಿಕೇರಿ, ಡಿ. 2: ರೋಟ್ರ್ಯಾಕ್ಟ್ ಜಿಲ್ಲಾ ಕ್ರೀಡಾಕೂಟವನ್ನು ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಸಿ.ಐ.ಟಿ. ರೋಟ್ರ್ಯಾಕ್ಟ್ ಕ್ಲಬ್ ಮತ್ತು ಅರಣ್ಯ ಮಹಾವಿದ್ಯಾಲಯದ ರೋಟ್ರ್ಯಾಕ್ಟ್ ಕ್ಲಬ್ ಜಂಟಿಯಾಗಿ ಕ್ರೀಡಾಕೂಟ ನಡೆಸಿದರು.

ರೋಟ್ರ್ಯಾಕ್ಟ್ ಜಿಲ್ಲಾ ಕ್ರೀಡಾಕೂಟಕ್ಕೆ ವಿವಿಧ ಜಿಲ್ಲೆಯ ಸುಮಾರು ಹತ್ತು ಕ್ಲಬ್‍ಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾಕೂಟದ ಉದ್ಘಾಟನೆಯನ್ನು ಡಿ.ಆರ್.ಆರ್. ಹಿತೈಶಿ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿ.ಐ.ಟಿ. ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಮಹಾಬಲೇಶ್ವರಪ್ಪ ಅವರು ಕ್ರೀಡಾಪಟುಗಳಿಗೆ ಆತ್ಮಸ್ಥೈರ್ಯ, ಛಲ ಹಾಗೂ ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹ ನೀಡಿದರು. ಮುಖ್ಯ ಅತಿಥಿಗಳಾಗಿ ಐ.ಐ.ಡಿ.ಆರ್.ಆರ್. ಮಹದೇವ ಸ್ವಾಮಿ, ಕ್ಲಬ್ ಚೇರ್‍ಮೆನ್ ದಿಲನ್ ಚಂಗಪ್ಪ, ಜಿಲ್ಲಾ ಕ್ರೀಡಾ ನಿರ್ದೇಶಕ ನಿಖಿಲ್, ಜೀಶಾನ್ ಹಾಗೂ ಶರಣ್ಯ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮೊದಲನೇ ಸ್ಥಾನವನ್ನು ಆರ್.ಸಿ.ಸಿ.ಐ.ಟಿ. ಪಡೆದುಕೊಂಡಿದ್ದು, 7 ಚಿನ್ನದ ಪದಕ, 3 ಬೆಳ್ಳಿ ಪದಕ ಹಾಗೂ 3 ಕಂಚಿನ ಪದಕ ಗಳಿಸಿದರು. ದ್ವಿತೀಯ ಸ್ಥಾನವನ್ನು ಆರ್.ಸಿ. ಸುಬ್ರಮಣ್ಯ ಪಡೆದುಕೊಂಡಿದ್ದು, 6 ಚಿನ್ನದ ಪದಕ, 7 ಬೆಳ್ಳಿ ಪದಕ ಹಾಗೂ 4 ಕಂಚಿನ ಪದಕ ಗಳಿಸಿದರು. ತೃತೀಯ ಸ್ಥಾನವನ್ನು ಆರ್.ಸಿ. ಮೈಸೂರು ಈಸ್ಟ್ 1 ಚಿನ್ನದ ಪದಕ, 1 ಕಂಚಿನ ಪದಕ ಗಳಿಸಿದರು.