ಮಡಿಕೇರಿ, ಸೆ. 21: ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಸಹಯೋಗದೊಂದಿಗೆ ವೀರಾಜಪೇಟೆ ರೋಟರಿ ವತಿಯಿಂದ ಬೃಹತ್ ದಂತ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಲಾಗಿತ್ತು.
ರೋಟರಿ ಅಧ್ಯಕ್ಷ ರಾಬಿನ್ ಮಂದಪ್ಪ ಅವರ ನೇತೃತ್ವದಲ್ಲಿ ದಂತ ಚಿಕಿತ್ಸಾಲಯದ ವೈದ್ಯರುಗಳ ಸಹಭಾಗಿತ್ವದಲ್ಲಿ ಸುಮಾರು 852 ವಿದ್ಯಾರ್ಥಿಗಳ ದಂತ ತಪಾಸಣೆ ನಡೆಸಲಾಯಿತು.
ವೀರಾಜಪೇಟೆ, ದೇವಣಗೇರಿ, ಚೆಂಬೆಬೆಳ್ಳೂರು, ಆರ್ಜಿ, ರೋಟರಿ ಶಾಲೆ, ಕೂರ್ಗ್ ವ್ಯಾಲಿ ಶಾಲೆಗಳಲ್ಲಿ ಶಿಬಿರ ನಡೆಯಿತು. ಈ ಸಂದರ್ಭ ರೋಟರಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಎಲ್ಲಾ ವಿದ್ಯಾರ್ಥಿ