ಸೋಮವಾರಪೇಟೆ, ಅ. 2: ಇಲ್ಲಿನ ರೋಟರಿ ಸಂಸ್ಥೆಯ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ ಸಫಾಲಿ ಸಭಾಂಗಣದಲ್ಲಿ ನಡೆಯಿತು.
ನಂದಿಗುಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಒ.ಜಿ. ಗಣಪತಿ, ಯಡವಾರೆ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಬಿ.ಜೆ. ತಮ್ಮಯ್ಯ, ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಕೆ.ಎನ್. ರಮೇಶ್, ಬೇಳೂರು ಸರ್ಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕಿ ನಿರ್ಮಲಾ ಹಾಗೂ ಸೋಮವಾರಪೇಟೆ ಓಎಲ್‍ವಿ ಕಾನ್ವೆಂಟ್‍ನ ಶಿಕ್ಷಕಿ ಲಕ್ಷ್ಮೀ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಟರಿ ರಾಜ್ಯಪಾಲ ಸುರೇಶ್ ಚಂಗಪ್ಪ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಕಾಯಕವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಅವರನ್ನು ಸಮಾಜದ ಎಲ್ಲರೂ ಗುರುತಿಸುವ ಕಾರ್ಯವಾಗಬೇಕು ಎಂದರು.
ರೋಟರಿ ಸಹಾಯಕ ರಾಜ್ಯಪಾಲ ಡಾ. ಪ್ರಶಾಂತ್, ಚಾಮರಾಜನಗರದ ರೋಟರಿ ಅಧ್ಯಕ್ಷ ವಿಶ್ವನಾಥ್, ಸೋಮವಾರ ಪೇಟೆ ರೋಟರಿ ಅಧ್ಯಕ್ಷ ಭರತ್ ಭೀಮಯ್ಯ, ಕಾರ್ಯದರ್ಶಿ ವನಮಾಲಿ ಹೆಬ್ಬಾರ್, ಪದಾಧಿಕಾರಿ ಗಳಾದ ಪಿ. ನಾಗೇಶ್, ಕೆ.ಡಿ. ಬಿದ್ದಪ್ಪ ಮತ್ತಿತರರು ಇದ್ದರು.