ಮಡಿಕೇರಿ, ಜ. 24: ವಿಶ್ವದ ವಿವಿಧೆಡೆಯಿಂದ ‘ರೋಟರಿ ನಿಧಿ’ ಸಹಾಯಧನ ಭಾರತದಲ್ಲಿ ಬೈಕ್ ಪರ್ಯಟನೆ ಕೈಗೊಂಡಿರುವ ಹದಿನಾಲ್ಕು ಬೈಕ್ ಸವಾರರಿಗೆ ರೋಟರಿ ಮಿಸ್ಟಿಹಿಲ್ಸ್ ನಿÀನ್ನೆದಿನ ಕೊಡವ ವಾಲಗ ಸಹಿತ ಸ್ವಾಗತ ಬಯಸಿತು.ಕ್ಯಾಪಿಟಲ್ ವಿಲೇಜ್ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರೋಟರಿ ಕುಟುಂಬದ ಪುಟಾಣಿಗಳು ವಿವಿಧ ದೇಶಗಳ ಬಾವುಟ ಹಿಡಿದು ರ್ಯಾಂಪ್ ವಾಕ್ ಮೂಲಕ ಅರ್ಥಪೂರ್ಣ ಬೆಸುಗೆಯ ಸಂದೇಶ ನೀಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ರೋಟರಾಕ್ಟ್ ವಿದ್ಯಾರ್ಥಿನಿಯರಿಂದ ಉಮ್ಮತ್ತಾಟ್ ಪ್ರದರ್ಶನ, ವ್ಯಾಲಿ ಡ್ಯೂ ಕಲ್ಚರಲ್ ಅಸೋಸಿಯೇಶನ್ನಿನಿಂದ ಬೊಳಕಾಟ್, ಕೋಲಾಟ, ಕತ್ತಿ ಆಟ್, ಆದ್ಯಾ ಮತ್ತು ಅಪೇಕ್ಷಾ ನೃತ್ಯ, ಶಮೀಕ್ ರೈ ಹಾಡು ಅತಿಥಿಗಳನ್ನು ರಂಜಿಸಿತು.

ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಗೋಣಿಕೊಪ್ಪ, ಕುಶಾಲನಗರ, ಪಿರಿಯಾಪಟ್ಟಣ, ಮತ್ತು ಹುಣಸೂರು ಕ್ಲಬ್‍ನ ಅಧ್ಯಕ್ಷರುಗಳು ವೇದಿಕೆ ಅಲಂಕರಿಸಿದ್ದರು.

ಸ್ಪೀಡನ್ನಿನಿಂದ ಬಂದಿದ್ದ ಮಾಜೀ ಗವರ್ನರ್ ಲ್ಯಾರಿ ಸೆರ್ವಿನ್ ಮಾತನಾಡಿ ಭಾರತದ ಭವ್ಯತೆ, ಜನತೆ ನೀಡುತ್ತಿರುವ ಅತಿಥಿ ಸತ್ಕಾರದಿಂದ ಹರ್ಷಿತರಾಗಿರುವದಾಗಿ ಹೇಳಿದರು. ಇಂಗ್ಲೆಂಡ್‍ನ ಅಲೆಗ್ಸಾಂಡರ್ ಕುಕ್ ಮಾತನಾಡಿ ಭಾರತದಲ್ಲಿ ತಮ್ಮ ಕ್ಲಬ್‍ನ ಮೂಲಕ ಕೈಗೊಂಡಿರುವ ಯೋಜನೆ ಕುರಿತು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಗನ್ನಾಥ್ ಮಾತನಾಡಿ ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಬೆಳೆÀಯುತ್ತಿದ್ದು, ದೆಹಲಿಯಿಂದ ಮಂಗಳೂರಿಗೆ ನೇರ ವಿಮಾನ ಸಂಪರ್ಕವಿದೆ ಎಂದರು. ಇದೀಗ ಕೇರಳದ ವಿಮಾನ ಸಂಪರ್ಕವೂ ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಪ್ರವಾಸಸ್ನೇಹಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರು ವದಾಗಿ ಹೇಳಿದರು.

ರೈಡ್ ಫಾರ್ ರೋಟರಿ ಜಿಲ್ಲಾ ಸಮಿತಿ ಅಧ್ಯಕ್ಷ ಮುರಳೀಧರ್‍ಪ್ರಭು ಮಾತನಾಡಿ ಬೈಕ್ ಪ್ರವಾಸದ ಮೂಲಕ ವಿವಿಧೆಡೆಯಿಂದ ಸಾಂಸ್ಕøತಿಕ ರಾಯಭಾರಿಗಳಂತೆ ಪ್ರತಿನಿಧಿಗಳು ಬಂದಿದ್ದು ಸುಮಾರು ಎರಡು ಸಾವಿರ ಕಿಲೋಮೀಟರಿನ ಪ್ರವಾಸ ಊಟಿಯಲ್ಲಿ ತಾ. 26 ರಂದು ಸಮಾಪ್ತಿಗೊಳ್ಳಲಿದೆ ಎಂದರು.

ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಅಪ್ಪಾಜಿ ಮಾತನಾಡಿ ವಿಶ್ವದಾದ್ಯಾಂತ ಸೇವಾಕಾರ್ಯಗಳಲ್ಲಿ ತೊಡಗಿರುವ ರೋಟರಿಯ ಪರಿಚಯ ಇನ್ನಷ್ಟು ಬೆಳಗಬೇಕಿದೆ ಎಂದರು.

ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ. ನವೀನ್ ವಂದನಾರ್ಪಣೆ ಮಾಡಿದರು. ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತಶಯನ ಕೊಡಗಿನ ಹಿರಿಮೆಯನ್ನು ಪರಿಚಯಿಸಿ ದರು. ಅಸಿಸ್ಟೆಂಟ್ ಗವರ್ನರ್ ಡಾ. ಪ್ರಶಾಂತ್ ನಿರೂಪಿಸಿದರು.