ವೀರಾಜಪೇಟೆ, ಆ. 25: ವೀರಾಜಪೇಟೆ ರೋಟರಿ ಕ್ಲಬ್ ಹಾಗೂ ಕ್ಲಬ್ ಮಹೇಂದ್ರ ಸಂಯುಕ್ತ ಆಶ್ರಯದಲ್ಲಿ ನಡೆದ ‘ರೇಸ್ ಫಾರ್ ಹ್ಯೂಮಾನಿಟಿ-2016’ರಲ್ಲಿ ಜಿಲ್ಲೆಯ 225 ಸ್ಪರ್ಧಿಗಳು ಭಾಗವಹಿಸಿದ್ದರು. ಅಮ್ಮತ್ತಿ ಪಟ್ಟಣದ ಹೊರವಲಯ ದಿಂದ ಆರಂಭಗೊಂಡ ರಸ್ತೆ ಓಟವು ಒಟ್ಟು 7.7 ಕಿ.ಮೀ. ದೂರವನ್ನು ಕ್ರಮಿಸಿ ವೀ.ಪೇ - ಸಿದ್ದಾಪುರ ರಸ್ತೆಯಲ್ಲಿನ ರೋಟರಿ ಪಾರ್ಕ್ನಲ್ಲಿ ಮುಕ್ತಾಯಕಂಡಿತು.
ಮ್ಯಾರಾಥಾನ್ಗೆ ರಾಜ್ಯ ಮಟ್ಟದ ಅಥ್ಲೆಟ್ ಸ್ಫೂರ್ತಿ ಸೀತಮ್ಮ ಚಾಲನೆ ನೀಡಿದರು.
ನಂತರ ನಡೆದ ಬಹುಮಾನ ವಿತರಣೆಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ರಾಬಿನ್ ಮಂದಣ್ಣ, ವೀರಾಜಪೇಟೆ ನಗರ ಠಾಣಾಧಿಕಾರಿ ಸುಬ್ರಮಣ್ಯ, ರೋಡ್ರೇಸ್ ಆಯೋಜಕರಾದ ಆದಿತ್ಯ, ಚೇತನ್, ಶಾಂತರಾಮ್ ಕಾಮತ್ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಸ್ಪರ್ಧೆಯ ವಿಜೇತರು: ಪುರುಷರ ವಿಭಾಗದಲ್ಲಿ, ಕುಶಾಲನಗರದ ಅಣ್ಣಯ್ಯ ಪ್ರಥಮ, ಭಾಗಮಂಡಲದ ಕೋಡಿ ಜಿತಿನ್ ದ್ವಿತೀಯ ಹಾಗೂ ರಾಘವೇಂದ್ರ ತೃತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಭಾಗಮಂಡಲದ ಸುಮಿತ್ರ ಪ್ರಥಮ, ಬಿ.ಬಿ. ನವ್ಯಶ್ರೀ ದ್ವಿತೀಯ ಹಾಗೂ ರಾಬಿಯ ತೃತೀಯ ಸ್ಥಾನ ಪಡೆದರು. ಪುರುಷರ ಜೂನಿಯರ್ನಲ್ಲಿ, ಕುಶಾಲನಗರದ ಡಿ.ಸಿ. ಪ್ರಶಾಂತ ಪ್ರಥಮ, ಕುಶಾಲನಗರದ ಎಂ.ಪಿ ಪವನ್ ದ್ವಿತೀಯ ಹಾಗೂ ಕುಶಾಲನಗರದ ಅಖಿಲೇಶ್ ತೃತಿಯ ಸ್ಥಾನ ಪಡೆದರು.
ಮಹಿಳಾ ಜೂನಿಯರ್ನಲ್ಲಿ ಹೆಗ್ಗಳ ಗ್ರಾಮದ ಎ.ಆರ್. ರಾಜೇಶ್ವರಿ ಪ್ರಥಮ, ವಿದ್ಯಾ ದ್ವಿತೀಯ ಹಾಗೂ ಪಿ.ಎಂ. ಚಿತ್ರಾ ತೃತೀಯ ಸ್ಥಾನ ಪಡೆದರು.
ಸಬ್ ಜೂನಿಯರ್ ವಿಭಾಗದಲ್ಲಿ, ವಿ.ಪೇ ರೋಟರಿ ಶಾಲೆಯ ಯೋಗೇಶ್ವರ್ ಪ್ರಥಮ, ವೀ.ಪೇ ವಿನಾಯಕ ಶಾಲೆಯ ಮಜಾಮಿಲ್ ದ್ವಿತೀಯ ಹಾಗೂ ಸಂತ ಅನ್ನಮ್ಮ ಶಾಲೆಯ ಶರಣ್ ತೃತಿಯ ಸ್ಥಾನ ಪಡೆದರು.
ಹೆಣ್ಣು ಮಕ್ಕಳ ಸಬ್ ಜ್ಯೂನಿಯರ್ ವಿಭಾಗದಲ್ಲಿ ವಿ.ಪೇ ರೋಟರಿ ಶಾಲೆಯ ಮುಬಾಶಿರ್ ಪ್ರಥಮ, ದೇವಮ್ಮ ದ್ವಿತೀಯ ಹಾಗೂ ಸಿ.ಎನ್. ದೇಚಮ್ಮ ತೃತೀಯ ಸ್ಥಾನ ಪಡೆದರು.