ಸುಂಟಿಕೊಪ್ಪ, ಡಿ. 29: ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎಂ. ನಿಷ್ಮ ನೆರವೇರಿಸಿದರು.
ಇಬ್ನಿವಳವಾಡಿ ಗ್ರಾಮದ ಕಾಫಿ ಬೆಳೆಗಾರ ನಂದಿನೆರವಂಡ ಅಪ್ಪಯ್ಯ, ಬೊಯಿಕೇರಿ ಸ.ಮಾ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಆರ್. ರಾಜು, ಬೊಯಿಕೇರಿ ಸ.ಮಾ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎ. ಆನಂದ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೆ.ಆರ್. ಕುಸುಮ ವಹಿಸಿದ್ದರು. ವೇದಿಕೆಯಲ್ಲಿ ಶಿಬಿರಾಧಿಕಾರಿ, ಸ.ಪ್ರ.ದ.ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಆರ್. ಶಶಿಧರ್, ಸಹಾಯಕ ಶಿಬಿರಾಧಿಕಾರಿಗಳಾದ ಪಿ.ಬಿ. ಸುರೇಶ್, ಕೆ.ಎಸ್. ಮೋಹನ್, ಕೆ.ಎಸ್. ಪೂರ್ಣಿಮಾ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಬಿ.ಆರ್. ಶಶಿಧರ್ ಸ್ವಾಗತಿಸಿ, ಎಂ. ಸ್ವಾತಿ ವಂದಿಸಿದರೆ, ಎಂಎಸ್. ಮಮತ ನಿರೂಪಿಸಿದರು.