ಮಡಿಕೇರಿ, ಜ. 11 : ಕರ್ನಾಟಕ ಟೆಕ್ವಾಂಡೊ ಸಂಸ್ಥೆ ಹಾಗೂ ಧಾರವಾಡ ಟೆಕ್ವಾಂಡೊ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಧಾರವಾಡದಲ್ಲಿ ನಡೆದ 14 ವರ್ಷದೊಳಗಿನ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ನಗರದ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳಾದ ಕೋಚನ ರುಚಿ ಅರುಣ್ ಒಂದು ಚಿನ್ನ, ಒಂದು ಕಂಚು, ಕಟ್ರತನ ಧನುಶ್ರೀ ವೆಂಕಟೇಶ್ ಒಂದು ಬೆಳ್ಳಿ, ಒಂದು ಕಂಚು, ಬೈಲೆರಾ ಚವಿಕ್ಷಾ ವಿಶ್ವನಾಥ್ ಒಂದು ಕಂಚು, ಬೈಲೆರಾ ಪ್ರೊಣಿಕ್ಷಾ ವಿಶ್ವನಾಥ್ ಒಂದು ಕಂಚು ಹಾಗೂ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಸೂಜೆóನ್ ಅನ್ವರ್‍ಪಾಷ ಒಂದು ಕಂಚಿನ ಪದಕವನ್ನು ಗೆದ್ದಿದ್ದಾರೆ.

ಚಿನ್ನದ ಪದಕ ಗಳಿಸಿರುವ ಕೋಚನ ರುಚಿ ಅರುಣ್ ಮುಂದಿನ ತಿಂಗಳು ವಿಶಾಖಪಟ್ಟಣದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾಳೆ ಎಂದು

ತಂಡದ ತರಬೇತುದಾರರಾದ ಕೂರ್ಗ್ ಟೆಕ್ವಾಂಡೊ ತರಬೇತಿ ಸಂಸ್ಥೆಯ ಬಿ.ಜಿ.ಲೋಕೇಶ್ ರೈ ತಿಳಿಸಿದ್ದಾರೆ.

ಧಾರವಾಡದ ಆರ್.ಎನ್.ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ರಾಜ್ಯದ ವಿವಿಧೆಡೆಯ 800 ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕೂರ್ಗ್ ಟೆಕ್ವಾಂಡೊ ತರಬೇತಿ ಸಂಸ್ಥೆಯ 16 ಮಂದಿ ಪದಕಕ್ಕಾಗಿ ಸೆಣಸಾಡಿದ್ದಾರೆ ಎಂದು ವ್ಯವಸ್ಥಾಪಕಿ ಕೆ.ಎಸ್.ಭವ್ಯಶ್ರೀ ಆಳ್ವ ಹೇಳಿದ್ದಾರೆ.