ಕೂಡಿಗೆ, ಡಿ. 4: ಕೂಡಿಗೆ ಕೃಷಿ ಆವರಣದಲ್ಲಿರುವ ಸರಕಾರಿ ಕ್ರೀಡಾಶಾಲೆಯ ವಿದ್ಯಾರ್ಥಿಗಳು ನ.25 ರಿಂದ 27ರ ವರೆಗೆ ಧಾರವಾಡದ ಆರ್‍ಎನ್‍ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ಕೂಡಿಗೆ ಕ್ರೀಡಾಶಾಲೆಯ ಇರ್ಫಾನ್ ಎ.ಆರ್.ಖಾನ್ 100 ಮೀ ಹಡಲ್ಸ್‍ನಲ್ಲಿ ದ್ವಿತಿಯ, ಎಂ.ಮನೋಜ್ 1500 ಓಟದಲ್ಲಿ ದ್ವಿತೀಯ, ಜ್ಯೋತಿ ಅವಟಿ ಉದ್ದ ಜಿಗಿತದಲ್ಲಿ ದ್ವಿತೀಯ, ತ್ರಿವಳಿ ಜಿಗಿತದಲ್ಲಿ ತೃತೀಯ, ಹೆಚ್.ಟಿ. ಗೌತಮ್ 100 ಮೀಟರ್‍ನಲ್ಲಿ ತೃತೀಯ ಸ್ಥಾನಗಳಿಸಿ ತೆಲಂಗಾಣದಲ್ಲಿ ಜನವರಿಯಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆಗೊಂಡಿದ್ದಾರೆ.

ನ. 26 ರಂದು ಬಾಗಲಕೋಟೆಯ ನವನಗರದಲ್ಲಿ ನಡೆದ ರಾಜ್ಯ ಪ್ರಾಥಮಿಕ ಶಾಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೂಡಿಗೆ ಕ್ರೀಡಾಶಾಲೆಯ ಸಿ.ಡಿ. ಗಾನವಿ 600 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನಗಳಿಸಿ ಮಂದಿನ ತಿಂಗಳಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾಪಟುಗಳಿಗೆ ತರಬೇತುದಾರರಾಗಿ ಅಂತೋಣಿ ಡಿಸೋಜ ಕಾರ್ಯನಿರ್ವಹಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ ತಿಳಿಸಿದ್ದಾರೆ.ಕೂಡಿಗೆ, ಡಿ. 4: ಕೂಡಿಗೆ ಕೃಷಿ ಆವರಣದಲ್ಲಿರುವ ಸರಕಾರಿ ಕ್ರೀಡಾಶಾಲೆಯ ವಿದ್ಯಾರ್ಥಿಗಳು ನ.25 ರಿಂದ 27ರ ವರೆಗೆ ಧಾರವಾಡದ ಆರ್‍ಎನ್‍ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ಕೂಡಿಗೆ ಕ್ರೀಡಾಶಾಲೆಯ ಇರ್ಫಾನ್ ಎ.ಆರ್.ಖಾನ್ 100 ಮೀ ಹಡಲ್ಸ್‍ನಲ್ಲಿ ದ್ವಿತಿಯ, ಎಂ.ಮನೋಜ್ 1500 ಓಟದಲ್ಲಿ ದ್ವಿತೀಯ, ಜ್ಯೋತಿ ಅವಟಿ ಉದ್ದ ಜಿಗಿತದಲ್ಲಿ ದ್ವಿತೀಯ, ತ್ರಿವಳಿ ಜಿಗಿತದಲ್ಲಿ ತೃತೀಯ, ಹೆಚ್.ಟಿ. ಗೌತಮ್ 100 ಮೀಟರ್‍ನಲ್ಲಿ ತೃತೀಯ ಸ್ಥಾನಗಳಿಸಿ ತೆಲಂಗಾಣದಲ್ಲಿ ಜನವರಿಯಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಆಯ್ಕೆಗೊಂಡಿದ್ದಾರೆ.

ನ. 26 ರಂದು ಬಾಗಲಕೋಟೆಯ ನವನಗರದಲ್ಲಿ ನಡೆದ ರಾಜ್ಯ ಪ್ರಾಥಮಿಕ ಶಾಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೂಡಿಗೆ ಕ್ರೀಡಾಶಾಲೆಯ ಸಿ.ಡಿ. ಗಾನವಿ 600 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನಗಳಿಸಿ ಮಂದಿನ ತಿಂಗಳಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾಪಟುಗಳಿಗೆ ತರಬೇತುದಾರರಾಗಿ ಅಂತೋಣಿ ಡಿಸೋಜ ಕಾರ್ಯನಿರ್ವಹಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ ತಿಳಿಸಿದ್ದಾರೆ.