ಕೂಡಿಗೆ, ಆ. 31: ಕೂಡಿಗೆ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿಯತ್ತ ಸಾಗಿ ರೂ. 10.62 ಲಕ್ಷ ಲಾಭಾಂಶ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಸಂಘದ ಮಾಸಿಕ ಸಭೆಯಲ್ಲಿ ಹೇಳಿದರು.

4218 ಸದಸ್ಯರನ್ನು ಹೊಂದಿರುವ ಸಂಘ ರೂ. 949.38 ಲಕ್ಷ ಸಾಲವನ್ನು ವಿತರಿಸಿದೆ. ವ್ಯವಹಾರ ಅಭಿವೃದ್ಧಿ ಸಾಲವಾಗಿ ರೂ. 11 ಲಕ್ಷ 50 ಸಾವಿರ, ಮಧ್ಯಂತರ ಅವಧಿಯ ಕೃಷಿ ಸಾಲ ರೂ. 18 ಲಕ್ಷದ 87 ಸಾವಿರ, ಚಿನ್ನಾಭರಣ ಸಾಲ 1 ಕೋಟಿ, ರೂ. 87 ಲಕ್ಷ ಕೆಸಿಸಿ ಸಾಲ, ರೂ. 4 ಕೋಟಿ 92 ಲಕ್ಷದ 20 ಸಾವಿರ, ಪಿಗ್ಮಿ ಸಾಲ (ಓ.ಡಿ) ರೂ. 1 ಕೋಟಿ 49 ಲಕ್ಷ, ಸ್ವಸಹಾಯ ಗುಂಪುಗಳಿಗೆ 11 ಲಕ್ಷ 57 ಸಾವಿರ, ಜಾಮೀನು ಸಾಲವಾಗಿ 6 ಲಕ್ಷದ 95 ಸಾವಿರ, ಇತರೆ ಠೇವಣಿಗಳ ಮೇಲೆ ರೂ. 5 ಕೋಟಿ ಒಂದು ಲಕ್ಷದ 45 ಸಾವಿರ ಸಾಲ ನೀಡಿ ರೈತರು ಹಾಗೂ ಈ ವ್ಯಾಪ್ತಿಯ ಸಾರ್ವಜನಿಕರಿಗೆ ಸಹಕರಿಸಿ ವ್ಯವಹರಿಸಿ, ಸಹಕಾರ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಪ್ರಯತ್ನಿಸಲಾಯಿತು ಎಂದು ಅವರು ಹೇಳಿದರು.

ಈ ಸಂದರ್ಭ ರೈತರುಗಳಿಗೆ ಸಹಕಾರ ಸಂಘದ ಮುಖೇನ ನೇರವಾಗಿ ಕಂಪೆನಿಗಳ ಗೊಬ್ಬರಗಳನ್ನು ತರಿಸಲು ಪರವಾನಿಗೆ ಪಡೆಯುವದರ ಮೂಲಕ ಈ ವ್ಯಾಪ್ತಿಯ ರೈತರ ಜಮೀನಿನ ಅನುಗುಣಕ್ಕೆ ತಕ್ಕಂತೆ ವಿವಿಧ ರಾಸಾಯನಿಕ ಗೊಬ್ಬರ ಹಾಗೂ ಜೋಳ, ಬಿತ್ತನೆ ಭತ್ತದ ದಾಸ್ತಾನು ಇಟ್ಟು ಸಮಯಕ್ಕೆ ಸರಿಯಾಗಿ ವಿತರಣೆ ಮಾಡುವ ಮೂಲಕ ಸಹಕಾರಿಯಾಗಿದೆ. ಇದರ ಜೊತೆಯಲ್ಲಿ ಪಕ್ಕದಲ್ಲಿರುವ ಸಹಕಾರ ಭವನದ ಮೂಲಕ ರೈತರ ವಿವಿಧ ಶುಭ ಸಮಾರಂಭಗಳಿಗೆ ಸಭಾಂಗಣದ ಸದ್ಬಳಕೆಯ ಮೂಲಕ ಸಂಘವು ಸಾರ್ವಜನಿಕರಿಗೆ ಸಹಕಾರ ನೀಡುತ್ತಾ ಸಾಗುತ್ತಿದೆ ಎಂದು ಸಂಘದ ವ್ಯವಸ್ಥಾಪಕಿ ಮೀನಾ ಹೇಳಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಹಾಜರಿದ್ದರು.