ಮಡಿಕೇರಿ, ಆ. 5: ಸಿರಿಗಂಧ ಕರ್ನಾಟಕ ಜಾನಪದ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ, ಅಲ್ಲಾರಂಡ ರಂಗ ಚಾವಡಿ ಸಂಯುಕ್ತ ಆಶ್ರಯದಲ್ಲಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಹಕಾರದಲ್ಲಿ ರಾಣಿ ಮಾಚಯ್ಯ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ರಾಣಿ ಮಾಚಯ್ಯ ಅವರಿಗೆ ಶಾಲು, ಫಲ-ತಾಂಬೂಲ, ರಾಣಿ ಮಾಚಯ್ಯ ಅವರ ಛಾಯಾಚಿತ್ರ ನೀಡಿ ಗೌರವಿಸ ಲಾಯಿತು. ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕೊಡಗಿನ ಸಂಸ್ಕøತಿ, ಕಲೆ, ಆಚಾರ-ವಿಚಾರಗಳನ್ನು ದೇಶ, ವಿದೇಶಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ರಾಣಿ ಮಾಚಯ್ಯ ಅವರ ಪರಿಶ್ರಮ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು. ಕೊಡವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ರಾಣಿ ಮಾಚಯ್ಯ ಅವರ ಕೊಡುಗೆ ಅಪಾರ, ರಾಣಿ ಮಾಚಯ್ಯ ಅವರು ಕೊಡಗಿನ ಜಾನಪದ ಉಮ್ಮತ್ತಾಟ್ ಕಲೆ ಉಳಿವಿಗಾಗಿ ತಂಡ ಮಾಡಿಕೊಂಡು ದೇಶ- ವಿದೇಶಗಳಿಗೆ ತೆರಳಿ ಜಿಲ್ಲೆಯ ಸಂಸ್ಕøತಿಯನ್ನು ಪರಿಚಯ ಮಾಡಿ ಕೊಟ್ಟಿದ್ದಾರೆ ಎಂದು ಎಂ.ಪಿ. ಅಪ್ಪಚ್ಚು ರಂಜನ್ ನುಡಿದರು.
ಸಮಾಜದಲ್ಲಿನ ಹಿರಿಯರನ್ನು ಗೌರವಿಸಬೇಕು. ಜೊತೆಗೆ ಸದಾ ಸ್ಮರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಹಿರಿಯರ ಜೊತೆ ಹೊಂದಾಣಿಕೆ ಯಿಂದ ನಡೆದುಕೊಳ್ಳಬೇಕು. ವೃದ್ಧಾಶ್ರಮಕ್ಕೆ ಯಾವದೇ ಕಾರಣಕ್ಕೂ ತಂದೆ ತಾಯಂದಿರನ್ನು ಸೇರಿಸಬಾರದು ಎಂದು ಇದೇ ಸಂದರ್ಭ ಕರೆ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಕೋಡಿರ ಲೋಕೇಶ್ ಅವರು ‘ಅಭಿನಂದನಾ ಗ್ರಂಥ’ ಬಿಡುಗಡೆ ಮಾಡಿ ಮಾತನಾಡಿ, ಹಲವು ಭಾಷಿಕರು ವಾಸ ಮಾಡುವ ಜಿಲ್ಲೆಯಲ್ಲಿ ಸಾಂಸ್ಕøತಿಕ ಪರಂಪರೆ, ಪದ್ಧತಿ, ಜಾನಪದ ಕಲೆಗಳನ್ನು ಉಳಿಸಿಕೊಂಡು ಹೋಗುತ್ತಿರುವ ರಾಣಿ ಮಾಚಯ್ಯ ಅವರ ಸೇವೆ ಅಪಾರ ಎಂದು ಬಣ್ಣಿಸಿದರು. ಆಧುನಿಕ ನಾಗರಿಕತೆ ಪ್ರಭಾವ ಬೀರುತ್ತಿರುವ ಇಂದಿನ ದಿನ ಗಳಲ್ಲಿಯೂ ಕೊಡಗಿನ ಸಾಂಸ್ಕøತಿಕ, ಜಾನಪದ ಕಲೆಗಳನ್ನು ಉಳಿಸಿಕೊಂಡು ಹೋಗುತ್ತಿರುವದು ಶ್ಲಾಘನೀಯ ಕಾರ್ಯ. ಹಿಂದಿನ ಆಚಾರ-ವಿಚಾರ, ಕಲೆ, ಸಂಸ್ಕøತಿಯನ್ನು ಉಳಿಸಿಕೊಂಡು ಹೋಗುವದು ಒಂದೆಡೆಯಾದರೆ ಆಧುನೀಕತೆಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಸಂಸ್ಕøತಿಯನ್ನು ಉಳಿಸಿಕೊಳ್ಳುವದು ಮತ್ತೊಂದು ಭಾಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಿರಿಗಂಧ, ಕರ್ನಾಟಕ ಜಾನಪದ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಸಿರಿಗಂಧ ಶ್ರೀನಿವಾಸ ಮೂರ್ತಿ ಅವರು ಮಾತನಾಡಿ, ಕೊಡಗಿನ ಜಾನಪದ ಕಲೆಗಳು, ಸಂಸ್ಕøತಿಯನ್ನು ಪರಿಚಯಿಸುವಲ್ಲಿ ರಾಣಿ ಮಾಚಯ್ಯ ಅವರ ಸೇವೆ ಸ್ಮರಣೀಯ. ಸಾಂಸ್ಕøತಿಕ ಕಲೆಗಳನ್ನು ಪರಿಚಯಿಸುವಲ್ಲಿ ಮೊದಲ ಹೆಸರು ರಾಣಿ ಮಾಚಯ್ಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಸಾಹಿತಿ ಕಾಳೇಗೌಡ ನಾಗವಾರ ಅವರು ಮಾತನಾಡಿ, ಕೊಡಗಿನ ಸಂಸ್ಕøತಿ ಶ್ರೀಮಂತವಾದುದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗ ಬೇಕು. ಆ ನಿಟ್ಟಿನಲಿ ಸಂಸ್ಕøತಿ, ಕಲೆ ಉಳಿಸಿ ಬೆಳೆಸಿಕೊಂಡು ಹೋಗು ತ್ತಿರುವವರನ್ನು ಸ್ಮರಿಸುವಂತಾಗಬೇಕು ಎಂದು ಹೇಳಿದರು.
ಉಪನ್ಯಾಸಕರು ಮತ್ತು ಸಾಹಿತಿ ಡಾ. ಜೆ. ಸೋಮಣ್ಣ ಅವರು ರಾಣಿ ಮಾಚಯ್ಯ ಅವರ ಕುರಿತು ಹೊರತಂದಿರುವ ‘ಆಕಾಶ ಗಂಗೆ ಚಿನ್ನದ ತಾವರೆಯ ಮಾಲೆ’ ಪುಸ್ತಕ ಕುರಿತು ಮಾತನಾಡಿ, ರಾಣಿ ಮಾಚಯ್ಯ ಅವರ ಸಾಂಸ್ಕøತಿಕ ವ್ಯಕ್ತಿತ್ವವನ್ನು ಪುಸ್ತಕದಲ್ಲಿ ಚಿತ್ರಿಸಲಾಗಿದೆ ಎಂದರು. ಎಫ್.ಎಂ.ಸಿ. ಕಾಲೇಜಿನ ಪ್ರಾಂಶುಪಾಲೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಉಮ್ಮತ್ತಾಟ್ ತಂಡವನ್ನು ಕರೆದುಕೊಂಡು ಕಾಲೇಜಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ರಾಣಿ ಮಾಚಯ್ಯ ಅವರು ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಮಾತನಾಡಿದರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಮತ್ತಿತರರು ಇದ್ದರು. ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಸ್ವಾಗತಿಸಿದರು. ಡಯಾನಾ ನಿರೂಪಿಸಿ, ವಂದಿಸಿದರು.