ಗುಡ್ಡೆಹೊಸೂರು, ಅ. 23: ಇಲ್ಲಿಗೆ ಸಮೀಪದ ಬಸವನಹಳ್ಳಿ ಶಾಲಾ ಮೈದಾನದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಫುಟ್ಬಾಲ್ ಪಂದ್ಯಾಟ ಬಸವನಹಳ್ಳಿ ಶಾಲಾ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯಾಟದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 20 ತಂಡಗಳು ಭಾಗವಹಿಸಿವೆ. ಪಂದ್ಯಾಟವನ್ನು ನಿವೃತ್ತ ಶಿಕ್ಷಕ ನಜೀರ್ ಅಮ್ಮದ್ ಉದ್ಘಾಟಿಸಿ ಶುಭಕೋರಿದರು. ಈ ಸಂದರ್ಭ ಬಸವನಹಳ್ಳಿ ಶಾಲೆಯ ದೈಹಿಕ ಶಿಕ್ಷಕ ಲಕ್ಷ್ಮಣ ಹಾಜರಿದ್ದರು.