ಗುಡ್ಡೆಹೊಸೂರು, ಅ. 23: ಬಸವನಹಳ್ಳಿಯ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ 3 ದಿನಗಳ ಕಾಲ ನಡೆಯಿತು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಮೈಸೂರು ವಿಭಾಗ ಪ್ರಥಮಸ್ಥಾನ, ದ್ವೀತಿಯ ಸ್ಥಾನವನ್ನು ಬೆಳಗಾಂ ತಂಡ

ಪಡೆಯಿತು. ಪ್ರೌಢಶಾಲಾ ವಿಭಾಗದಲ್ಲಿ ಬೆಳಗಾಂ ತಂಡ ಪ್ರಥಮ ಸ್ಥಾನಪಡೆದರೆ, ದ್ವೀತಿಯ ಸ್ಥಾನವನ್ನು ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆ ಪಡೆಯಿತು. ನಿನ್ನೆ ಸಂಜೆ ಸಮಾರೋಪ ಸಮಾರಂಭ ನಡೆಯಿತು. ಅಧ್ಯಕ್ಷತೆಯನ್ನು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕೆÀ್ಷ ಭಾರತಿ ವಹಿಸಿದ್ದರು.

ಅತಿಥಿಗಳಾಗಿ ಜಿ.ಪಂ. ಸದಸ್ಯ ಲತೀಫ್, ತಾ.ಪಂ. ಸದಸ್ಯೆ ಪುಷ್ಪ ಮತ್ತು ಜಿಲ್ಲಾ ಪಂ.ಮಾಜಿ ಸದಸ್ಯೆ ಸುಲೋಚನ ಮತ್ತು ಸೋಮವಾರಪೇಟೆ ತಾ.ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕುಡೆಕಲ್ ಸುಶೀಲ, ಗುಡ್ಡೆಹೊಸೂರು ಪಿ.ಡಿ.ಓ. ವೇಣುಗೋಪಾಲ್. ಮತ್ತು ಶಾಲಾ ಮುಖ್ಯಶಿಕ್ಷಕ ಕೃಷ್ಣನಾಯ್ಕ, ಮತ್ತು ಗ್ರಾ.ಪಂ. ಸದಸ್ಯರಾದ ಬಿ.ಟಿ. ಪ್ರಸನ್ನ, ನಾರಯಣ, ಡಾಟಿ, ಕಾವೆರಪ್ಪ, ಶಿಕ್ಷಕ ಶ್ರೀನಿವಾಸ ಹಾಜರಿದ್ದರು. ಈ ಸಂದರ್ಭ ಬಿ.ಪಿ. ಗುರುಬಸಪ್ಪ ಮತ್ತು ದೈಹಿಕ ಶಿಕ್ಷಕ ಪ್ರಭು ಅವರನ್ನು ಸನ್ಮಾನಿಸಲಾಯಿತು.