ಗೋಣಿಕೊಪ್ಪಲು, ಸೆ.6: ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ತಾ.2,3,4 ರಂದು ಜರುಗಿದ ಅಮೇಚೂರು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೊಡಗಿನ ಕೆ.ಆರ್.ಪ್ರಜ್ವಲ್ ಮಂದಣ್ಣ ಅತೀ ವೇಗದ ಓಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 100 ಮೀಟರ್ ಓಟದ ಸ್ಪರ್ಧೆಯಲ್ಲಿ 10.7 ಸೆಕೆಂಡ್ನಲ್ಲಿ ಗುರಿ ಸಾಧನೆ ಮಾಡಿ ದಾಖಲೆ ನಿರ್ಮಾಣ ಮಾಡಿದ್ದಾರಲ್ಲದೆ, ಈ ಹಿಂದಿನ ರಾಜ್ಯದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮೂಡಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ (ವಾಣಿಜ್ಯ) ವ್ಯಾಸಂಗ ಮಾಡುತ್ತಿರುವ ಕಾಕೇರ ಆರ್. ಪ್ರಜ್ವಲ್ 200 ಮೀಟರ್ ಓಟದಲ್ಲಿಯೂ ಬೆಳ್ಳಿಯನ್ನು ಗೆದ್ದು ವೈಯಕ್ತಿಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಪೆÇನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಿಲ್ಲಾ ಮಟ್ಟದ 100 ಮೀಟರ್ ಓಟದಲ್ಲಿ ಪ್ರಜ್ವಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು.
ಮುಂದಿನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 10.4 ಸೆಕೆಂಡ್ನಲ್ಲಿ ಗುರಿ ಸಾಧನೆ ಮಾಡಲು ಪ್ರಜ್ವಲ್ ನಿರ್ಧರಿಸಿದ್ದಾರೆ. ಮೂಲತಃ ಪೆÇನ್ನಂಪೇಟೆ ಸಮೀಪ ಮತ್ತೂರು ಗ್ರಾಮದ ಕಾಕೇರ ರವಿ ಮತ್ತು ತಾರಾ ದಂಪತಿಗಳ ಹಿರಿಯ ಪುತ್ರ ಪ್ರಜ್ವಲ್ ಅವರು 18 ವಯೋಮಿತಿಯ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜನ್ನು ಪ್ರತಿನಿಧಿಸಿದ್ದು, ರಾಜ್ಯ ಕ್ರೀಡಾಕೂಟದಲ್ಲಿ ಈ ಹಿಂದಿನ ದಾಖಲೆಯನ್ನು ಸರಿಗಟ್ಟಿರುವದು ಕೊಡಗಿನ ಯುವಕನ ಸಾಧನೆಯಾಗಿದೆ. ಮುಂದೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಅಂತರ್ರಾಷ್ಟ್ರೀಯ ಮಟ್ಟ ಹಾಗೂ ಒಲಂಪಿಕ್ಗೆ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಸತತ ಪರಿಶ್ರಮವಹಿಸಲಾಗುವದು ಎಂದು ತಿಳಿಸಿದ್ದಾರೆ. ಪೆÇನ್ನಂಪೇಟೆ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕ ತಿಮ್ಮಯ್ಯ ಅವರ ಉತ್ತೇಜನ ಹಾಗೂ ಇದೀಗ ಮೂಡಬಿದಿರೆಯಲ್ಲಿ ದೈಹಿಕ ನಿರ್ದೇಶಕ ಶಾಂತಾರಾಮ್ ಅವರ ಪೆÇ್ರೀತ್ಸಾಹ ವೈಯಕ್ತಿಕ ಸಾಧನೆಗೆ ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ.