ಮೂರ್ನಾಡು, ನ. 28: ಇಲ್ಲಿಗೆ ಸಮೀಪದ ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಅಂತರರಾಷ್ಟ್ರೀಯ ಶವುಲಿನ್ ಕುಂಗ್ ಫೂ ಕರಾಟೆ ಶಾಲೆಯ ವತಿಯಿಂದ ಕರಾಟೆ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು.

ಶಾಲೆಯ ಸಭಾಂಗಣದಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಶಾಲೆಯ 33 ವಿದ್ಯಾರ್ಥಿಗಳು ತೇರ್ಗಡೆಯಾಗಿ ವಿವಿಧ ರೀತಿಯ ಬೆಲ್ಟ್‍ಗಳನ್ನು ಪಡೆದುಕೊಂಡರು. ಕರಾಟೆ ಶಾಲೆಯ ಶಿಕ್ಷಕರಾದ ಶಿಪು ಇಂದ್ರಜಿತ್, ಗಂಗಾಧರ್, ದೇವರಾಜ್ ಮತ್ತು ಶಾಲೆಯ ತರಬೇತುದಾರ ನಾಟೋಳಂಡ ನಂಜುಂಡ ಅವರ ಸಮ್ಮುಖದಲ್ಲಿ ಪರೀಕ್ಷೆ ನಡೆಯಿತು. ಶಾಲಾ ವಿದ್ಯಾರ್ಥಿ ಕೆ.ಎಸ್. ಹಿತೇಶ್ ಈ ಸಂದರ್ಭ ಬ್ಲ್ಯಾಕ್‍ಬೆಲ್ಟ್ ಪಡೆದುಕೊಂಡರು.