ಮಡಿಕೇರಿ, ನ. 4: ಐತಿಹಾಸಿಕ ಮಡಿಕೇರಿ ಕೋಟೆ ಆವರಣಲ್ಲಿರುವ ಪ್ರಮುಖ ಆಕರ್ಷಣೆಯಾಗಿರುವ ಕಲ್ಲಿನ ಆನೆಗಳಿರುವ ಸ್ಥಳದಲ್ಲಿ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಹಸಿರು ಉದ್ಯಾನ ನಿರ್ಮಿಸಲಾಗಿದೆ.

ಪ್ರಾಚ್ಯವಸ್ತು ಇಲಾಖೆಯಿಂದ ಈಗಾಗಲೇ ನೆಲ ಸಮತಟ್ಟು ಮಾಡಲಾಗಿದ್ದು, ಇದೀಗ ಹಸಿರು ಹುಲ್ಲನ್ನು ಅಳವಡಿಸಲಾಗಿದೆ. ಮೇಲಧಿಕಾರಿಗಳ ಆದೇಶದಂತೆ ಪ್ರಾಚ್ಯ ವಸ್ತು ಇಲಾಖೆ ಉಸ್ತುವಾರಿಯಾಗಿರುವ ಎಎಸ್‍ಐ ಬೊಳ್ತಂಡ ಶಿವಯ್ಯ ಅವರ ಉಸ್ತುವಾರಿಯಲ್ಲಿ ಈ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಕೋಟೆ ಆವರಣದ ಅಂದ ಮತ್ತಷ್ಟು ಹೆಚ್ಚಾಗಲಿದೆ.

- ಸಂತೋಷ್