ಮಡಿಕೇರಿ, ಆ. 20: ನಗರದ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪ ಹಾಗೂ ಗೌಡ ಸಮಾಜದ ಹಿಂಭಾಗದ ರಾಘವೇಂದ್ರ ಸನ್ನಿಧಿಯಲ್ಲಿ ಇಂದು ಶ್ರೀ ಗುರು ರಾಘವೇಂದ್ರ ಆರಾಧನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಬೆಳಗ್ಗಿನಿಂದಲೇ ಸ್ಥಳೀಯ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ಪೂಜಾ ವಿಧಿವಿಧಾನಗಳು ನೆರವೇರಿದವು. ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.ಮಧುಮೇಹ ತಪಾಸಣೆ
ಇದೇ ಸಂದರ್ಭ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಮಧುಮೇಹ ತಪಾಸಣೆಯು ನಡೆಯಿತು. ಸುಮಾರು 65 ಮಂದಿಗೆ ಮಧುಮೇಹ ತಪಾಸಣೆ ಮಾಡಲಾಯಿತು. ಈ ಸಂದರ್ಭ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಬಿ.ಕೆ. ಅರುಣ್, ಸದಸ್ಯರಾದ ಸವಿತ ಭಟ್, ಗೀತಾ ಗಿರೀಶ್, ರಮೇಶ್ ಹೊಳ್ಳ, ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮತ್ತಿತರರು ಇದ್ದರು.
ಗೌಡ ಸಮಾಜದ ಹಿಂಭಾಗ ವಿರುವ ರಾಘವೇಂದ್ರ ಸನ್ನಿಧಿ ಯಲ್ಲಿಯೂ ಗುರು ರಾಘವೇಂದ್ರ ಆರಾಧನೆ ಸಂಭ್ರಮದಿಂದ ಜರುಗಿತು. ಸನ್ನಿಧಿಯ ಪುರೋಹಿತರಾದ ಗಪ್ಪಣ್ಣ ಸ್ವಾಮಿ ಅವರ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಬಳಿಕ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆ ನಡೆಯಿತು.