*ಗೋಣಿಕೊಪ್ಪಲು, ಅ. 25: ಕೈಕೇರಿ ಕೊಡವ ಸಮಾಜ ರಸ್ತೆಗೆ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆÉ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಅತ್ತೂರು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ರಸ್ತೆ ಅಭಿವೃದ್ಧಿಗಾಗಿ ಶಾಸಕರ ಅನುದಾನದಿಂದ ರೂ. 3 ಲಕ್ಷ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರ ಅನುದಾನದಿಂದ ರೂ. 5 ಲಕ್ಷ ಮತ್ತು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರ ಅನುದಾನದಿಂದ 2 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.
ಈ ಸಂದÀರ್ಭ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ತಾಲೂಕಿನ ಅಭಿವೃದ್ಧಿಗಾಗಿ ಬಿ.ಜೆ.ಪಿ. ಸರಕಾರ ಆಡಳಿತದಲ್ಲಿದ್ದ ಸಂದÀರ್ಭ ಹೆಚ್ಚು ಅನುದಾನಗಳು ಬರುತ್ತಿದ್ದವು. ಸರಕಾರ ಬದಲಾದ ವರ್ಷದಿಂದ ಅನುದಾನ ಕಡಿಮೆಗೊಂಡಿದೆ. ಹೀಗಾಗಿ ತಾಲೂಕಿನ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಸಿ ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ಬಿ.ಜೆ.ಪಿ. ಸರಕಾರ ಬಂದರೆ ತಾಲೂಕನ್ನು ಅಭಿವೃದ್ಧಿಗೊಳಿಸಲಾಗುವದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ, ಅತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾಲತಾ ಉಪಾಧ್ಯಕ್ಷ ಗಿರೀಶ್ ಪೂವಣ್ಣ, ಕೊಡವ ಸಮಾಜದ ಖಜಾಂಚಿ ಕೊಕ್ಕಂಡ ಕುಶ ಮತ್ತು ಪ್ರಮುಖರಾದ ಜಮ್ಮಡ ಕವಿತಾ, ಕೃಷ್ಣ, ಸುಬ್ರಮಣಿ ಹಾಜರಿದ್ದರು.