ಕೂಡಿಗೆ, ಡಿ. 11: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಉಪ ಗ್ರಾಮಗಳಿಗೆ ತೆರಳುವ ರಸ್ತೆ ಕಾಮಗಾರಿಗೆ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಭೂಮಿ ಪೂಜೆ ನೆರವೇರಿಸಿದರು.

ತಾಲೂಕು ಪಂಚಾಯಿತಿ ಅನುದಾನದಲ್ಲಿ ಚಿಕ್ಕತ್ತೂರು, ನವಗ್ರಾಮ ಬಡಾವಣೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿತು.

ನಂತರ ಮಾತನಾಡಿದ ಗಣೇಶ್, ತಾಲೂಕು ಪಂಚಾಯಿತಿ ಅನುದಾನದಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಅತೀ ಹೆಚ್ಚು ಅವಶ್ಯವಿರುವ ರಸ್ತೆಗಳಿಗೆ ಮೆಟ್ಲಿಂಗ್ ಮತ್ತು ಡಾಂಬರೀಕರಣಗೊಳಿಸುವದು ಅಲ್ಲದೆ, ಪರಿಶಿಷ್ಟ ಪಂಗಡದ ಅನುದಾನದಲ್ಲಿ ಈ ವ್ಯಾಪ್ತಿಯ ಕಾಮಗಾರಿಗಳಿಗೆ ಹೆಚ್ಚು ಒತ್ತುಕೊಡಲಾಗುವದು ಎಂದರು.

ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಬಾಸ್ಕರ್ ನಾಯಕ್, ಅಶ್ವಿನ್ ಕುಮಾರ್, ಪಾರ್ವತಮ್ಮ, ಜಯಮ್ಮ, ಕೂಡುಮಂಗಳೂರು ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರಸ್ವಾಮಿ, ವೈ.ಸಿ. ಕೃಷ್ಣ, ಗ್ರಾಮದ ಪ್ರಮುಖರುಗಳಾದ ರಾಧಕೃಷ್ಣ, ಸ್ವಾಮಿ, ಗೀತಾ ಮತ್ತಿತರರು ಇದ್ದರು.