ಸುಂಟಿಕೊಪ್ಪ, ಆ. 27: ತಮ್ಮ ಸಹೋದರಿಯರಿಗೆ ರಕ್ಷಣೆ ನೀಡುವದು ಸಹೋದರರ ಆದ್ಯ ಕರ್ತವ್ಯ ಎಂದು ದೇಯಿ ಬೈದೇದಿ ಬಿಲ್ಲವ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಅಂಜಲಿ ಯಶೋದರಾ ಪೂಜಾರಿ ಹೇಳಿದರು.
ಇಲ್ಲಿನ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ. ಮಣಿ ಮುಖೇಶ್ ವಹಿಸಿದ್ದರು. ಈ ಸಂದರ್ಭ ದೇಯಿ ಬೈದೇದಿ ಬಿಲ್ಲವ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಅಂಜಲಿ ಯಶೋದರಾ ಪೂಜಾರಿ, ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಗೌರವಾಧ್ಯಕ್ಷ ಬಿ.ಕೆ. ಮೋಹನ್, ಉಪಾಧ್ಯಕ್ಷ ದೇವಪ್ಪ ಪೂಜಾರಿ, ಗೀತಾ ವಿಶ್ವನಾಥ್, ಕಾರ್ಯದರ್ಶಿ ಹರೀಶ್ ಪೂಜಾರಿ, ಖಜಾಂಚಿ ಚಂದ್ರ ಪೂಜಾರಿ, ಸಂಘಟನಾ ಕಾರ್ಯದರ್ಶಿ ಮಿಲನ್, ಕ್ರೀಡಾ ಕಾರ್ಯದರ್ಶಿ ಬಿ.ಟಿ. ಸತೀಶ್, ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧು ನಾಗಪ್ಪ, ಕಾರ್ಯದರ್ಶಿ ಮಹಿಮಾ ಸತ್ಯಕುಮಾರ್, ಸಹ ಕಾರ್ಯದರ್ಶಿ ಪೂರ್ಣಿಮಾ ರವಿ ಹಾಗೂ ವೀಣಾ ಮತ್ತಿತರರು ಇದ್ದರು.
ಸಂಘದ ಸದಸ್ಯರುಗಳು ರಾಕಿ ಕಟ್ಟುವದರ ಮೂಲಕ ಶುಭಾಶಯ ಕೋರಿದರು. ಮೊದಲಿಗೆ ಸಂಘದ ಖಜಾಂಚಿ ಚಂದ್ರ ಸ್ವಾಗತಿಸಿ, ಹರೀಶ್ ವಂದಿಸಿದರು.