ಗುಡ್ಡೆಹೊಸೂರು, ಸೆ. 8: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಪರ್ಲಕೋಟಿ ಅಶೋಕ ಅವರಿಗೆ ಸೇರಿದ ನಾಟಿ ಮಾಡಿದ ಒಂದು ಏಕರೆ ಪ್ರದೇಶದ ಭತ್ತದ ಗದ್ದೆಯನ್ನು ಗಣೇಶ ಹಬ್ಬದ ದಿನವೇ ಸಂಪೂರ್ಣ ನಾಶಪಡಿಸಿವೆ. ಕಾಫಿ ಮತ್ತು ಬಾಳೆಯ ತೋಟಕ್ಕೂ ಧಾಳಿ ನಡೆಸಿದ ಕಾಡಾನೆಗಳು ತಿಂದು ನಾಶಪಡಿಸಿವೆ. ರಂಗಸಮುದ್ರ ಮತ್ತು ಹೊಸಪಟ್ಟಣ ಗ್ರಾಮದಲ್ಲಿ ನಿರಂತರ ಆನೆ ಧಾಳಿ ನಡೆಯುತ್ತಿರುವದಾಗಿ ಅಲ್ಲಿನ ರೈತರು ದೂರಿದ್ದಾರೆ. ಹಲವಾರು ಸಮಸ್ಯೆಗಳ ನಡುವೆಯೂ ರೈತರು ಭತ್ತದ ಬೇಸಾಯ ಮಾಡಲು ಮುಂದಾದರೂ ಕೊನೆಯಲ್ಲಿ ಬೆಳೆದ ಫಸಲನ್ನು ಆನೆಗಳಿಗೆ ಮೇವಾಗಿ ನೀಡಬೆಕಾಗುತ್ತದೆ. ಒಂದೆಡೆ ನೀರಿನ ಸಮಸ್ಯೆ ಮತ್ತೊಂದೆಡೆ ಕಾರ್ಮಿಕರ ಸಮಸ್ಯೆ ಎಲ್ಲದಕ್ಕೂ ಹೆಚ್ಚಾಗಿ ಕಾಡು ಪ್ರಾಣಿಗಳ ಹಾವಳಿ ಈ ಸಮಸ್ಯೆಗಳ ನಡುವೆ ರೈತರು ತಮ್ಮ ಗದ್ದೆಗಳನ್ನು ಪಾಳು ಬಿಡುವ ಪರಿಸ್ಥಿತಿ ಬಂದಿದೆ. ಮೈಸೂರು ವಿಭಾಗದ ಅರಣ್ಯದಿಂದ ಈ ವಿಭಾಗಕ್ಕೆ ಆನೆ ಧಾಳಿ ನಡೆಸುತ್ತಿವೆ ಎಂದು ಅಲ್ಲಿನ ರೈತರು ದೂರಿದ್ದಾರೆ.