ಗೋಣಿಕೊಪ್ಪಲು, ಜ. 5: ಗ್ರಾಮೀಣ ಭಾಗದ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳನ್ನು ಹೊರಸೂಸಲು ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಅನುದಾನ ಮಂಜೂರು ಮಾಡಿದ್ದು, ರೂ. 5 ಲಕ್ಷ ವೆಚ್ಚದಲ್ಲಿ ಮಾಯಮುಡಿ ಶಾಲೆಯ ರಂಗ ಮಂಟಪಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜಾ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅನುದಾನ ಮಂಜೂರು ಮಾಡಿದ್ದು, ಈ ಅನುದಾನದಿಂದ ಜಿಲ್ಲಾ ಪಂಚಾಯಿತಿ ಮೂಲಕ ಕಾಮಗಾರಿ ಆರಂಭಿಸಲಾಗುವದು ಎಂದರು.
ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಮಾತನಾಡಿ, ಈ ರಂಗ ಮಂದಿರದ ಅಡಿಪಾಯ ನಿರ್ಮಾಣಕ್ಕೆ 2011-12ರ ಸಾಲಿನಲ್ಲಿ ರೂ. 1 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸ ಲಾಗಿತ್ತು. ಇದೀಗ ರೂ. 5 ಲಕ್ಷ ಅನುದಾನ ಮಂಜೂರಾಗಿರುವ ದರಿಂದ ಉತ್ತಮ ರಂಗ ಮಂದಿರ ನಿರ್ಮಾಣವಾಗಲಿದೆ. ವಿದ್ಯಾರ್ಥಿ ಗಳಿಗೆ ಹಾಗೂ ನಾಡಿನ ಜನತೆಗೆ ಇದು ಪ್ರಯೋಜನಕಾರಿ ಆಗಲಿದೆ ಎಂದರು. ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಹೆಚ್.ಎಸ್. ಗೌರಿ ರಾಮು, ಸದಸ್ಯರಾದ ಟಿಪ್ಪು ಬಿದ್ದಪ್ಪ, ವಿಠಲ, ಚಿಣ್ಣಪ್ಪ, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಮಾಜಿ ಉಪಾಧ್ಯಕ್ಷ ವಿಲ್ಸನ್, ಎಸ್.ಡಿ.ಎಂ.ಸಿ, ಅಧ್ಯಕ್ಷ ಹಂಸ ಪ್ರೌಢಶಾಲೆಯ ಮುಖ್ಯೋಪಾಧ್ಯಾ ಯಿನಿ ವಾಣಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸೋಫಿಯ, ತಿತಿಮತಿ ಝೋನಲ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.