ವೀರಾಜಪೇಟೆ, ಜ. 31: ಶಿಸ್ತು, ಶ್ರದ್ಧೆ, ಸಮಯ ಪ್ರಜ್ಞೆಯಿಂದ ಶಿಕ್ಷೆಯ ಹೊರತಾದ ಮೌಲ್ಯಯುತ ಶಿಕ್ಷಣದಿಂದ ವಿದ್ಯಾಸಂಸ್ಥೆಗಳು ರಾಷ್ಟ್ರದ ಭವಿಷ್ಯದ ಪ್ರಜೆಗಳನ್ನು ರೂಪಿಸಲು ಸಾಧ್ಯ ಎಂದು ಗೋಣಿಕೊಪ್ಪಲಿನ ನ್ಯಾಷನಲ್ ಅಕಾಡೆಮಿ ಶಾಲೆಯ ಪ್ರಾಂಶುಪಾಲ ಪಳಂಗಂಡ ಮೇದಪ್ಪ ಅಭಿಪ್ರಾಯಪಟ್ಟರು. ಇಲ್ಲಿನ ಪಂಜರ್ಪೇಟೆಯ ಸುಭಾಷ್ನಗರದಲ್ಲಿರುವ “ಯೂರೋ ಕಿಡ್ಸ್” ಶಾಲೆಯ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವೀರಾಜಪೇಟೆಯ ಸೆರಿನಿಟಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಬೊಟ್ಟೋಳಂಡ ಪ್ರತಿಮಾ ರಂಜನ್ ವರದಿ ವಾಚಿಸಿದರು. ಸಂಸ್ಥೆಯ ಅಧ್ಯಕ್ಷ ಕಲಿಯಂಡ ಅಯ್ಯಪ್ಪ ಉಪಸ್ಥಿತರಿದ್ದರು.
ಪುನೀತ ಸ್ವಾಗತಿಸಿ, ಹರ್ಷಿತಾ ಹಾಗೂ ಪ್ರಿಯ ನಿರೂಪಿಸಿ, ದೀನಾ ಜೀವನ್ ವಂದಿಸಿದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.