ಮಡಿಕೇರಿ, ಡಿ. 27 : ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವಕೇಂದ್ರ ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ ತಾಲೂಕು ಯುವ ಒಕ್ಕೂಟ ಹಾಗೂ ಕೆ.ಎಂ. ಕಾರ್ಯಪ್ಪ ಕಾಲೇಜು ಸಂಯುಕ್ತ ಆಶ್ರಯದಲ್ಲಿ ತಾ. 30 ರವರೆಗೆ ನಡೆಯುವ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರಕ್ಕೆ ನಗರದ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಭಾಂಗಣದಲ್ಲಿ ಚಾಲನೆ ದೊರೆಯಿತು.

ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕ ಮನುಮುತ್ತಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ ಯುವ ಜನಾಂಗ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು.

ಕರ್ನಾಟಕ ಐ.ಸಿ.ಎಂ. ಸಂಸ್ಥೆಯ ಪ್ರಾಂಶುಪಾಲೆ ರೇಣುಕಾ ಮಾತನಾಡಿ ಎಫ್.ಎಮ್.ಕೆ.ಎಂ.ಸಿ. ಸಂಸ್ಥೆಯಿಂದ ಯುವಜನರಿಗೆ ದೊರೆಯುವ ತರಬೇತಿ ಶಿಬಿರದ ಮಾಹಿತಿ ನೀಡಿದರು. ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ, ನೆಹರೂ ಯುವ ಕೇಂದ್ರದ ಕಾರ್ಯಕ್ರಮಗಳ ಬಗ್ಗೆ ಯುವಕ - ಯುವತಿ ಮಂಡಳಿಗಳ ಪಾತ್ರ ಈ ವಿಷಯವಾಗಿ ಶಿಬಿರಾರ್ಥಿಗಳಿಗೆ ವಿವರಿಸಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ.ಜೋಯಪ್ಪ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಉಪಾಧ್ಯಕ್ಷೆ ಇಂದುಮತಿ, ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಪಿ.ಪಿ.ಸುಕುಮಾರ್, ಸಲಹೆಗಾರರಾದ ರಾಣಿಮಾಚಯ್ಯ ಹಾಗೂ ಇತರರು ಇದ್ದರು.

ಶಿಬಿರಾರ್ಥಿಗಳಾಗಿ ಮಡಿಕೇರಿ ತಾಲೂಕಿನ ವಿವಿಧ ಯುವಕ ಹಾಗೂ ಯುವತಿ ಮಂಡಳಿ ಸದಸ್ಯರು ಹಾಗೂ ಎಫ್.ಎಂ.ಕೆ.ಎಂ.ಸಿ. ಬಿ.ಎಸ್. ಡಬ್ಲ್ಯೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ.ಬಿ.ಜೋಯಪ್ಪ ಸ್ವಾಗತಿಸಿ, ನವೀನ್ ದೇರಳ ನಿರೂಪಿಸಿದರು. ನೆಲ್ಲಕ್ಕಿ ಯುವತಿ ಮಂಡಳಿಯ ಕೇಕಡ ಜೀವಿತಾ ರವೀಂದ್ರ ಪ್ರಾರ್ಥಿಸಿದರು. ದಿನದ ನಿರ್ವಹಣೆಯನ್ನು ಜಿಲ್ಲಾ ಯುವ ಒಕ್ಕೂಟದ ಕಾರ್ಯದರ್ಶಿ ಪಿ.ಪಿ.ಸುಕುಮಾರ್ ವಂದಿಸಿದರು. ನಂತರ ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.