ಗೋಣಿಕೊಪ್ಪಲು, ನ. 12: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಯುವ ಸದಸ್ಯತ್ವ ಅಭಿಯಾನಕ್ಕೆ ಪಟ್ಟಣದಲ್ಲಿ ಸ್ಥಳೀಯ ಯುವ ಕಾಂಗ್ರೆಸ್ ಅಧ್ಯಕ್ಷ ಜೆ.ಕೆ. ಸೋಮಣ್ಣ ಸದಸ್ಯತ್ವ ಅರ್ಜಿ ಸ್ವೀಕರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ, ಪೊನ್ನಂಪೇಟೆ ಬ್ಲಾಕ್ ಮಟ್ಟದಲ್ಲಿ ಸುಮಾರು 500 ಸದಸ್ಯತ್ವ ಪಡೆಯುವ ಉದ್ದೇಶ ಹೊಂದಲಾಗಿದೆ. ಒಂದು ಸದಸ್ಯತ್ವದಿಂದ ನಾಲ್ಕು ನಾಮ ನಿರ್ದೇಶನದ ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿದೆ. ಇವರಲ್ಲಿ ಒಬ್ಬರಿಗೆ ಮಾತ್ರ ಪಕ್ಷದ ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ಮತ ಹಾಕುವ ಹಕ್ಕಿರಲಿದೆ.

ಬೇರು ಮಟ್ಟದಲ್ಲಿಯೇ ಪಕ್ಷವನ್ನು ಬೆಳೆಸುವ ಉದ್ದೇಶದಿಂದ ಅಭಿಯಾನ ನಡೆಯುತ್ತಿದೆ. ಯುವತಿಯರಿಗೂ ಕೂಡ ಸಮಾನ ಪ್ರಾತಿನಿದ್ಯ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಉಪಾಧ್ಯಕ್ಷ ಕೆ.ಎನ್. ಸೋಮಣ್ಣ, ಸದಸ್ಯರುಗಳಾದ ಸರ್ಪುದ್ದೀನ್ ಹಾಗೂ ಮುರುಗ ಉಪಸ್ಥಿತರಿದ್ದರು.