ಮಡಿಕೇರಿ, ಆ. 26: ದಕ್ಷಿಣ ಕನ್ನಡ ಜಿಲ್ಲಾ ಮೊಗೇರ ಸಂಘ, ಮೊಗೇರ ಸಾಮೂಹಿಕ ವಿವಾಹ ವೇದಿಕೆ ಮತ್ತು ಮೊಗೇರ ಸಂಘಗಳ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಈ ಬಾರಿ ಕೂಡ ನಡೆಯಲಿದ್ದು, ಸೆ. 25 ರಂದು ದಕ್ಷಿಣ ಕÀನ್ನಡ ಜಿಲ್ಲೆಯ ಬಿ.ಸಿ. ರೋಡ್‍ನ ಅನುಗ್ರಹ ಚರ್ಚ್ ಹಾಲ್‍ನಲ್ಲಿ ಆಯೋಜಿಸಲಾಗಿದೆ ಎಂದು ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪಿ.ಎಂ. ರವಿ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೊಗೇರ ಸಮಾಜದ ಬಂಧುಗಳು ಸಾಮೂಹಿಕ ವಿವಾಹ ಸಮಾರಂಭದ ಲಾಭ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಉಚಿತ ಸಾಮೂಹಿಕ ವಿವಾಹ ಮಾಡಿಕೊಳ್ಳಲು ಇಚ್ಛಿಸುವ ವಧು-ವರರು ತಮ್ಮ ಹೆಸರನ್ನು ಸೆ. 20 ರೊಳಗೆ ನೋಂದಾಯಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.
ವಿವಾಹ ಮಾಡಿಕೊಳ್ಳುವವರು ಮೊಗೇರ ಸಮಾಜಕ್ಕೆ ಸೇರಿದವರೇ ಆಗಿರಬೇಕೆಂದು ತಿಳಿಸಿರುವ ಪಿ.ಎಂ. ರವಿ, ಸಾಮೂಹಿಕ ವಿವಾಹ ಮಾಡಿಕೊಂಡವರಿಗೆ ಸರ್ಕಾರದಿಂದ ದೊರಕುವ ಪ್ರೋತ್ಸಾಹ ಧನ 50 ಸಾವಿರ ರೂ.ಗಳನ್ನು ಸಂಘದ ಮೂಲಕ ದೊರಕಿಸಿಕೊಡಲಾಗುವದೆಂದು ತಿಳಿಸಿದ್ದಾರೆ. ಸಾಮೂಹಿಕ ವಿವಾಹಕ್ಕೆ ಹೆಸರು ನೋಂದಾಯಿಸಿ ಕೊಳ್ಳುವವರು ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷರು ಪಿ.ಎಂ. ರವಿ (ಮೊ. 94832 33656), ಮಡಿಕೇರಿ ತಾಲೂಕು ಅಧ್ಯಕ್ಷರು ಪಿ.ಬಿ. ಸುರೇಶ್ (ಮೊ. 94497 54996), ಸೋಮವಾರಪೇಟೆ ತಾಲೂಕು ಅಧ್ಯಕ್ಷರು ಬಿ.ಎಂ ದಾಮೋದರ (ಮೊ. 94499 98576), ವೀರಾಜಪೇಟೆ ತಾಲೂಕು ಅಧ್ಯಕ್ಷರು ಜಿ. ಮೋಹನ್ (ಮೊ. 9481756360) ಇವರುಗಳನ್ನು ಸಂಪರ್ಕಿಸಬಹುದು.