ಮಡಿಕೇರಿ, ಜ. 20: ನಿನ್ನೆ ದಿನ ಬೆಕ್ಕೆಸೊಡ್ಲೂರುವಿನಲ್ಲಿ ಉರುಳಿಗೆ ಸಿಕ್ಕಿಹಾಕಿಕೊಂಡು ಅರಣ್ಯ ಇಲಾಖೆಯಿಂದ ರಕ್ಷಿತಗೊಂಡಿದ್ದ ಕಿರಿ ವಯಸ್ಸಿನ ಹುಲಿಯನ್ನು ಮೈಸೂರಿನ ಮೃಗಾಲಯಕ್ಕೆ ಸಾಗಾಟಗೊಳಿಸಿ ಚಿಕಿತ್ಸೆ ನೀಡಲಾಗಿತ್ತು. ಮೃಗಾಲಯದ ವೈದ್ಯರುಗಳ ಪ್ರಕಾರ ಇಂದು ಸಂಜೆವರೆಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಹುಲಿ ಇದ್ದಕ್ಕಿದ್ದಂತೆ ದಿಢೀರ್ ಸಾವಿಗೀಡಾಯಿತೆಂದು ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ಕಾನೂನಾತ್ಮಕ ಕ್ರಮವೇನಾದರೂ ಜರುಗುವದೇ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ‘ಶಕ್ತಿ' ಪ್ರಶ್ನಿಸಿದಾಗ ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಅವರು ಪ್ರತಿಕ್ರಿಯಿಸಿದರು. ಉರುಳಿನಲ್ಲಿ ಸಿಕ್ಕಿಹಾಕಿಕೊಂಡ ಸ್ಥಳವು ಸರ್ಕಾರಿ ಜಾಗವಾಗಿರುವದರಿಂದ ಯಾವ ವ್ಯಕ್ತಿಗಳ ಬಗ್ಗೆಯೂ ಕ್ರಮಾನುಸರಣೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.