ಸುಂಟಿಕೊಪ್ಪ, ಜ. 17: ತಲಾ ತಲಾಂತರಗಳಿಂದ ಗುಡೆಹೊಸೂರು ವ್ಯಾಪ್ತಿಯ ಅರಣ್ಯದ ಅಂಚಿನಲ್ಲಿ ಗುಡಿಸಿಲಿನಲ್ಲಿಯೇ ಜೀವನ ಸಾಗಿಸುತ್ತಿರುವ ಮೂಲನಿವಾಸಿಗಳಿಗೆ ಸೂರು ಹಾಗೂಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.ಗುಡ್ಡೆಹೊಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಹಲವು ದಶಕಗಳಿಂದಲೂ ಮೂಲ ನಿವಾಸಿಗಳಾದ ಗಿರಿಜನರು ಗುಡಿಸಿಲಿನಲ್ಲಿ 4 ರಿಂದ 5 ಕಟುಂಬಗಳು ವಾಸಿಸುತ್ತಿದ್ದರೂ ಅವರಿಗೆ ಇಂದಿಗೂ ಸೂರು ಹಾಗೂ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ. ಅವುಗಳನ್ನು ಒದಗಿಸಲು ಮುಂದಾಗದಿರುವ ಇಲಾಖಾಧಿಕಾರಿಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಅರಣ್ಯವಾಸಿಗಳಿಗೆ ದೊರೆಯ ಬೇಕಾದ ಮೂಲಭೂತ ಸೌಕರ್ಯಗಳನ್ನು ಹಕ್ಕುಪತ್ರಗಳನ್ನು ನೀಡುವ ಮೂಲಕ ಸಕಲಸವಲತ್ತು ಗಳನ್ನು ಒದಗಿಸಲು ಕ್ರಮಕೈಗೊಳು ್ಳವಂತೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖಾಧಿ ಕಾರಿಗಳನ್ನು ಒತ್ತಾಯಿಸಿದ್ದಾರೆ.