ಮಡಿಕೇರಿ, ಜ.20 : ವಿವಿಧೆಡೆಗಳಿಂದ ದಿಡ್ಡಳ್ಳಿಗೆ ಬಂದು ಕಾನೂನು ಬಾಹಿರವಾಗಿ ನೆಲೆ ನಿಂತ ಕುಟುಂಬಗಳಿಗೆ ನಿವೇಶನಗಳನ್ನು ಒದಗಿಸುವದಕ್ಕೂ ಮೊದಲು ಜಿಲ್ಲೆಯ ವಿವಿಧ ಹಾಡಿಗಳಲ್ಲಿ ನೆಲೆಸಿರುವ ಮೂಲ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸೌಲಭ್ಯಗಳನ್ನು ಒದಗಿಸಬೇಕೆಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಪಂಕಜ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಹಕ್ಕುಕಾಯ್ದೆಯಂತೆ 2005ರ ಒಳಗೆ ಅರಣ್ಯ ವ್ಯಾಪ್ತಿಯಲ್ಲಿ ನೆಲೆಸಿದವರಿಗೆ ಮಾತ್ರ ಹಕ್ಕುಪತ್ರಗಳನ್ನು ಒದಗಿಸಲು ಅವಕಾಶವಿದೆ. ಕೇವಲ ಕೆಲವು ತಿಂಗಳ ಹಿಂದೆಯಷ್ಟೆ ದಿಡ್ಡÀಳ್ಳಿಯ ಅರಣ್ಯ ಪ್ರದೇಶದಲ್ಲಿ ನೆಲೆ ನಿಂತು ಇದೀಗ ಅರಣ್ಯದ ಹೊರ ಪ್ರದೇಶದಲ್ಲಿರುವ 570 ಕ್ಕೂ ಹೆಚ್ಚಿನ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯನ್ವಯ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿಲ್ಲ ಎನ್ನುವದನ್ನು ಆಡಳಿತ ವ್ಯವಸ್ಥೆ ಅರ್ಥ ಮಾಡಿಕೊಳ್ಳಬೇಕೆಂದರು.
ದಿಡ್ಡಳ್ಳಿಯಲ್ಲಿ ನೆಲೆ ನಿಂತಿರುವ ವÀರಲ್ಲಿ ಹಲವು ಮಂದಿ ನೆÉರೆಯ ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಬಂದವರಾಗಿದ್ದಾರೆ. ಅವರಿಗೆ ಸೌಲಭ್ಯವನ್ನು ಒದಗಿಸುವದಕ್ಕೂ ಮೊದಲು ಸೂಕ್ತ ತನಿಖೆ ನಡೆಸಬೇಕು ಮತ್ತು ಮೂಲ ಆದಿವಾಸಿಗಳಿಗೆ ಮಾತ್ರ ಹಕ್ಕುಪತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಬೇಕೆಂದು ಪಂಕಜ ಒತ್ತಾಯಿಸಿದರು.
ಮಾಲ್ದಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಗ್ರಾಮದ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ರಾಜು ಮಾತನಾಡಿ, ದಿಡ್ಡಳ್ಳ್ಳಿಯಲ್ಲಿ ಹೊರ ಪ್ರದೇಶಗಳಿಂದ 577 ಕುಟುಂಬಗಳು ಬಂದು ಗುಡಿಸಲುಗಳಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಆಶ್ರಮ ಶಾಲೆಯಲ್ಲಿನ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಸರಕಾರ ಗುರುತಿಸಿರುವ ಜಾಗಗಳಿಗೆ ಅವರನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಅರಣ್ಯ ಹಕ್ಕು ಕಾಯ್ದೆಯಂತೆ ಜಿಲ್ಲಾಡಳಿತ ಮತ್ತು ಐಟಿಡಿಪಿ ಇಲಾಖೆಗಳು ಈ ಹಿಂದೆಯೆ ಆದಿವಾಸಿಗಳಿಗೆ ಅಗತ್ಯ ನಿವೇಶನ ಮತ್ತು ಸೌಲಭ್ಯಗಳನ್ನು ಒದಗಿಸಿದ್ದಲ್ಲಿ ಈ ರೀತಿಯ ಸಮಸ್ಯೆ ಉದ್ಭವ ವಾಗುತ್ತಿರಲಿಲ್ಲವೆಂದು ಅಭಿಪ್ರಾಯಪಟ್ಟರು.
ಬುಡಕಟ್ಟು ಕೃಷಿಕರ ಸಂಘದ ಪ್ರಮುಖರಾದ ಸಂಜೀವ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಂತೆ ಜಿಲ್ಲೆಯ ಮೂಲನಿವಾಸಿ ಆದಿವಾಸಿಗಳಿಗೆ ಅಗತ್ಯ ಸೌಲಭ್ಯಗಳು ದೊರಕದೆ ಇರುವ ಹಂತದಲ್ಲಿ ಕಾನೂನು ಬಾಹಿರವಾಗಿ ದಿಡ್ಡಳ್ಳಿಯಲ್ಲಿ ನೂರಾರು ಗಿರಿಜನ ಕುಟುಂಬಗಳು ನೆಲೆ ನಿಂತಿವೆ. ಇದೀಗ ಅವರನ್ನು ಎ.ಕೆ. ಸುಬ್ಬಯ್ಯ ಸೇರಿದಂತೆ ನಿರ್ವಾಣಪ್ಪ, ಎಸ್‍ಡಿಪಿಐ, ದಸಂಸ ಸಂಘÀಟನೆಗಳು ಬೆಂಬಲ ನೀಡುತ್ತಿರುವದು ಬೇಸರ ಮೂಡಿಸಿದೆ. ದಿಡ್ಡಳ್ಳಿಯ ನಿರಾಶ್ರಿತರನ್ನು ಬೆಂಬಲಿಸುತ್ತಿರುವ ಭೂಮಿ ಮತ್ತು ನಿವೇಶನ ಹಕ್ಕು ಹೋರಾಟ ಸಮಿತಿ ಇಷ್ಟು ದಿನ ಎಲ್ಲಿ ಇತ್ತೆಂದು ಪ್ರಶ್ನಿಸಿದರು.
ಮೂಲ ಆದಿವಾಸಿಗಳಿಗೆ ಅಗತ್ಯ ಸವಲತ್ತುಗಳನ್ನು ಕಾನೂನು ಬದ್ಧವಾಗಿ ಒದಗಿಸದೆ ಅತ್ಯಂತ ಕೀಳು ಮಟ್ಟದಿಂದ ನಡೆಸಿಕೊಳ್ಳಲಾಗುತ್ತಿದೆ. ಗಿರಿಜನರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಬುಡಕಟ್ಟು ಕೃಷಿಕರ ಸಂಘÀದಿಂದ ಬೃಹತ್ ಪ್ರತಿಭಟನೆ ನಡೆಸಬೆÉೀಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ವಿಚಾರ ಸಂಕಿರಣ
ಬುಡಕಟ್ಟು ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶದಿಂದ ತಾ.23 ರಂದು ಬೆಳಗ್ಗೆ 10.30 ಗಂಟೆಗೆ ಪಾಲಿಬೆಟ್ಟದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಚಾರ ಸಂಕಿರಣವÀನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ ಸಂಜೀವ ಬುಡಕಟ್ಟು ಜನಾಂಗದ ಪ್ರಮುಖರು, ಸದಸ್ಯರು ಹಾಗೂ ಬೆಳೆÉಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಣ್ಣ ಬೆಳೆಗಾರರ ಸಂಘದ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, ದಿಡ್ಡಳ್ಳಿ ಪ್ರಕರಣದ ಮೂಲಕ ಕಾಫಿ ಬೆಳೆಗಾರರು ಮತ್ತು ಆದಿವಾಸಿಗಳ ನಡುವೆ ಸಂಘರ್ಷ ಹುಟ್ಟು ಹಾಕುವ ಪ್ರಯತ್ನ ಮಾಡಲಾಗಿದ್ದು, ಇದನ್ನು ಹೋಗಲಾಡಿಸಬೇಕಾಗಿದೆ. ಪ್ರಸ್ತುತ ಗಿರಿಜನರನ್ನು ಬೆಳೆಗಾರರು ಶೋಷಣೆಗೆ ಒಳಪಡಿಸುತ್ತಿದ್ದಾರೆ ಎನ್ನುವ ತಪ್ಪು ಅಭಿಪ್ರಾಯಗಳನ್ನು ಮೂಡಿಸ ಲಾಗುತ್ತಿದ್ದು, ಇದನ್ನು ಖಂಡಿಸುವದಾಗಿ ತಿಳಿಸಿದರು.
ದಿಡ್ಡಳ್ಳಿಯಲ್ಲಿ ನಿರಾಶ್ರಿತರೆಂದು ಹೇಳಿಕೊಂಡು ನೆಲೆ ನಿಂತಿರುವವರ ಸಂಖ್ಯೆ 610 ನ್ನು ಮೀರಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ 700ರ ಗಡಿ ದಾಟಬಹುದೆಂದು ಅಭಿಪ್ರಾಯ ಪಟ್ಟರು. ಜಿಲ್ಲೆಯ ಸಾಮರಸ್ಯ ಕದಡುವ ಸಂಘಟನೆಗಳ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕೆಂದು ನಂದಾಸುಬ್ಬಯ್ಯ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳೆಗಾರ ಎ.ಕೆ. ಕುಂಞಪ್ಪ ಉಪಸ್ಥಿತರಿದ್ದರು.