ನಾಪೆÉÇೀಕ್ಲು, ಸೆ. 29: ಜಿಲ್ಲೆಯಲ್ಲಿ ಮುಸ್ಲಿಂ ಜನಾಂಗದವರ ಮೇಲೆ ವಿನಾ ಕಾರಣ ಹಲ್ಲೆ ಮತ್ತು ಸುಳ್ಳು ಆಪಾದನೆಗಳನ್ನು ಹೊರಿಸುವ ಕೆಲಸವಾಗುತ್ತಿದ್ದು ಮುಸ್ಲಿಂ ಜನಾಂಗದವರು ಜಾಗೃತರಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಿ.ಎಂ.ಖಾಸಿಂ ಕರೆ ನೀಡಿದರು.
ನಾಪೆÉÇೀಕ್ಲು ಚೆರಿಯಪರಂಬು ಸಾಧಿ ಮಹಲ್‍ನಲ್ಲಿ ಏರ್ಪಡಿಸಿದ್ದ ಮುಸ್ಲಿಂ ಒಕ್ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ಕಗ್ಗೋಡ್ಲುವಿನಲ್ಲಿ ಕೃಷಿಗಾಗಿ ಸಾಕಣೆ ಮಾಡಲು ದನಗಳನ್ನು ಒಯ್ಯುವ ಸಂದರ್ಭ ಅನವಶ್ಯಕವಾಗಿ ಕೆಲವು ಕೀಡಿಗೆಡಿಗಳು ಅವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದರು. ಈ ಬಗ್ಗೆ ಪೆÇಲೀಸರಿಗೆ ದೂರು ನೀಡಿದರೂ ಪೆÇಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಲು ಮೀನಾ ಮೇಷ ಎಣಿಸುತ್ತಿರುವದು ಏಕೆ ಎಂದು ಪ್ರಶ್ನಿಸಿದರು. ಈ ಎಲ್ಲಾ ಬೆಳವಣಿಗೆಗಳನ್ನು ಅವಲೋಕಿಸಿದಾಗ ಮುಂದೆ ನಾವು ಜಾಗೃತರಾಗದಿದ್ದರೆ ಇಂತಹ ಘಟನೆಗಳನ್ನು ನಮ್ಮ ಸಮುದಾಯದ ಮೇಲೆ ನಿರಂತರವಾಗಿ ಹೇರುವದು ಖಚಿತ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಜಿಲ್ಲೆಯ ಎಲ್ಲಾ ಜಮಾಅತ್ ಸಹಕಾರದೊಂದಿಗೆ ಒಕ್ಕೊರಲ ನಿರ್ಣಯವನ್ನು ಕೈಗೊಳ್ಳುವದರ ಮೂಲಕ ಜನಾಂಗದ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಸಭೆಯಲ್ಲಿ ಮುಖಂಡ ಮಜೀದ್ ಕೊಡ್ಲಿಪೇಟೆ, ಕೆ.ಎಂ. ಇಬ್ರಾಹಿಂ, ಎಂ.ಎ. ಮನ್ಸೂರ್ ಆಲಿ, ವಕೀಲ ಕುಂಞ ಅಬ್ದುಲ್ಲ, ಕೊಟ್ಟಮುಡಿ ಹಂಸ, ಅಬ್ದುಲ್ ರಹಿಮಾನ್, ಮಕ್ಕಿ ನಾಸೀರ್, ಎಡಪಾಲ ಮಮ್ಮು, ಸಿ.ಕೆ ಐಮ್ಮದ್ ಹಾಜಿ, ಮಹಮ್ಮದ್ ಹನೀಫ್, ಪಿ.ಎಂ. ಅಬ್ದುಲ್ ಅಜೀಜ್, ಹ್ಯಾರೀಸ್ ಕೋಳಕೇರಿ, ಮೈದು, ಸೋಮವಾರಪೇಟೆಯ ಆದಂ, ಕೂಡಿಗೆಯ ಹಮೀದ್, ಮತ್ತಿತರರು ಇದ್ದರು.