ಸೋಮವಾರಪೇಟೆ, ಜ. 16: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ದೇವಾಲಯ ಸಮಿತಿ ಆಶ್ರಯದಲ್ಲಿ ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ದೇವಾಲಯಗಳ ಗರ್ಭಗುಡಿ ಯಷ್ಟೆ ಸ್ವಚ್ಛತೆ ಹಾಗೂ ಪ್ರಶಾಂತತೆಯನ್ನು ದೇವಾಲಯ ಆವರಣಗಳ ವ್ಯಾಪ್ತಿಗೂ ವಿಸ್ತರಿಸಿ ದರೆ, ಬರುವ ಭಕ್ತರ ಮನಸ್ಸಿಗೂ ನೆಮ್ಮದಿ ದೊರಕಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಅಭಿಪ್ರಾಯಿಸಿದರು. ಕಾರ್ಯಕ್ರಮ ದಲ್ಲಿ ಪಪಂ ಸದಸ್ಯೆ ಲೀಲಾ ನಿರ್ವಾಣಿ, ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ನಾಯರ್, ರೋಟರಿ ಹಿಲ್ಸ್‍ನ ಅಧ್ಯಕ್ಷ ಭರತ್ ಭೀಮಯ್ಯ, ದೇವಾಲಯ ಸಮಿತಿ ಗೌರವಾಧ್ಯಕ್ಷ ಎನ್.ಜಿ. ಜನಾರ್ಧನ್ ಮತ್ತಿತರರು ಇದ್ದರು. ಒಕ್ಕೂಟದ ಸದಸ್ಯರುಗಳು ಎರಡೂ ದೇವಾಲಯಗಳ ಆವರಣವನ್ನು ಸ್ವಚ್ಛಗೊಳಿಸಿದರು.