ಸೋಮವಾರಪೇಟೆ,ನ.30: ಸಮೀಪದ ಕಲ್ಕಂದೂರು ಕೆಸಿಸಿ ಕ್ರಿಕೆಟರ್ಸ್ ವತಿಯಿಂದ ತಾ. 3 ಮತ್ತು 4ರಂದು ಯಡೂರಿನ ಬಿಟಿಸಿಜಿ ಕಾಲೇಜು ಮೈದಾನದಲ್ಲಿ ಮುಕ್ತ ಟಿನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ತಾ.3ರಂದು ಬೆಳಿಗ್ಗೆ 9 ಗಂಟೆಗೆ ಬಿಟಿಸಿಜಿ ಕಾಲೇಜು ಪ್ರಾಂಶುಪಾಲ ಐಪು ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದು, ಗ್ರಾ.ಪಂ. ಸದಸ್ಯೆ ವನಜಾಕ್ಷಿ ತಿಮ್ಮಯ್ಯ, ವಿಎಸ್‍ಎಸ್‍ಎನ್ ಸದಸ್ಯ ವಿಜಯ್, ಜಾಮಿಯ ಮಸೀದಿ ಅಧ್ಯಕ್ಷ ಉಮ್ಮರ್, ಪ್ರಮುಖರಾದ ಲೋಹಿತ್, ಉಮಾ ವಿಜಯ್ ಅವರುಗಳು ಭಾಗವಹಿಸಲಿದ್ದಾರೆ. ತಾ. 4ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕರವೇ ಅಧ್ಯಕ್ಷ ದೀಪಕ್, ಉದ್ಯಮಿ ಹರಪಳ್ಳಿ ರವೀಂದ್ರ, ಷರೀಫ್, ಪ್ರವೀಣ್, ಹಾನಗಲ್ಲು ಗ್ರಾ.ಪಂ. ಉಪಾಧ್ಯಕ್ಷ ಮಿಥುನ್ ಅವರುಗಳು ಭಾಗವಹಿಸಲಿದ್ದಾರೆ.
ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ ರೂ. 11 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ 5,500 ನಗದು ಹಾಗೂ ಟ್ರೋಫಿ ಸೇರಿದಂತೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವದು. ಪಂದ್ಯಾಟಗಳು 5 ಓವರ್‍ಗಳಿಗೆ ಸೀಮಿತವಾಗಿದ್ದು, ಹೆಚ್ಚಿನ ವಿವರಗಳಿಗೆ ಮೊ: 9449986763/9482980994 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.