ಮಡಿಕೇರಿ, ಡಿ. 22: ಕರ್ನಾಟಕ ರಾಜ್ಯ ವಿಧಾನ ಪರಿಷತ್‍ನ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಅನಿರೀಕ್ಷಿತ ಭೇಟಿ ನೀಡಿದರು.

ಗ್ರಾಮ ಪಂಚಾಯಿತಿಯ ಅಭಿವೃದ್ಧಿ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನಗಳ ಬಗ್ಗೆ ಹಾಗೂ ಅವುಗಳ ಅನುಷ್ಠಾನದ ಪ್ರಗತಿ ಬಗ್ಗೆ ಪರಿಶೀಲಿಸಿ ಸೂಕ್ತ ಮಾರ್ಗದರ್ಶನವನ್ನು ಪಿ.ಡಿ.ಓ. ಅವರಿಗೆ ನೀಡಿದರು. ಆನೆ ಕಾಟ, ನಿರಾಶ್ರಿತರ ಸಮಸ್ಯೆ, ಶೌಚಾಲಯ ನಿರ್ಮಾಣ, ಕುಡಿಯುವ ನೀರು, ರಸ್ತೆಗಳು, ಪಡಿತರ ವ್ಯವಸ್ಥೆ, ಕಸ ವಿಲೇವಾರಿ, ಕಾನೂನು ಸುವ್ಯವಸ್ಥೆ, ಹಕ್ಕು ಪತ್ರಗಳ ವಿತರಣೆ, ವಸತಿ ಯೋಜನೆಗಳ ಬಗ್ಗೆ ಪಿ.ಡಿ.ಓ. ಅವರಿಂದ ಸಮಗ್ರ ಮಾಹಿತಿ ಪಡೆದರು. ಅಲ್ಲದೇ, ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು. ಕುಡಿಯುವ ನೀರಿನ ಸಮಸ್ಯೆಗೆ ಟಾಸ್ಕ್ ಫೆÇೀರ್ಸ್‍ನಡಿ ಸೂಕ್ತ ಪ್ರಸ್ತಾವನೆಯನ್ನು ಕಳುಹಿಸಿ ಕೊಡಲು ಸೂಚಿಸಿದರು.

ಇದೇ ಸಂದರ್ಭ ಸೋಮವಾರಪೇಟೆ ತಾ.ಪಂ. ಮಾಜಿ ಅಧ್ಯಕ್ಷ ಲೊಕೇಶ್, ತಾ.ಪಂ. ಸದಸ್ಯ ಜೆನಿಶ್, ಪಿ.ಡಿ.ಓ. ರಾಜೇಶ್ ಬಿ.ಕೆ, ಸ್ಥಳೀಯರಾದ ಮೋಹನ್, ಗ್ರಾ.ಪಂ. ಅಧ್ಯಕ್ಷೆ ರಾಣಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜಾರಾವ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.