ಮಡಿಕೇರಿ, ಡಿ. 3: ಮಾದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಸಂತೆ ಏರ್ಪಡಿಸಲಾಗಿತ್ತು. ಚಿಣ್ಣರ ಸಂತೆಯನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಸೈನಾರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾದಾಪುರ ಕ್ಲಸ್ಟರ್ ಸಿ.ಆರ್.ಪಿ. ವಸಂತ್ ಕುಮಾರ್, ಪಿ.ಡಿ.ಓ. ಎಸ್.ಟಿ. ಶ್ಯಾಮ್, ಲೆಕ್ಕಸಹಾಯಕ ಟಿ.ಜಿ. ಕೀರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಪ್ರೀತಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರು ಮತ್ತು ಸದಸ್ಯರು, ಮೂವತ್ತೋಕ್ಲು ಶಾಲಾ ಶಿಕ್ಷಕಿ ರೀಟಾ, ಕುಂಬೂರು ಮುಖ್ಯ ಶಿಕ್ಷಕ ರಾಜಣ್ಣ, ಚೆನ್ನಮ್ಮ ಪ್ರೌಢಶಾಲೆ, ಮಾದಾಪುರ ಪ್ರೌಢಶಾಲೆ, ಶಿಕ್ಷಕರು ಇದ್ದರು.
ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿಗಳು, ಹಣ್ಣು, ಸೊಪ್ಪು, ಎಳನೀರು, ತಿಂಡಿಗಳು, ನೆಲ್ಲಿಕಾಯಿ, ಸೌತೆಕಾಯಿ ಇತ್ಯಾದಿಗಳನ್ನು ತಂದು ವ್ಯಾಪಾರ ಮಾಡಿದರು. ಮನರಂಜನೆಗಾಗಿ ಲಾಟರಿ ಆಟ, ಪಿರಮಿಡ್ ಬ್ರೇಕಿಂಗ್ ಇತ್ಯಾದಿ ಆಟಗಳನ್ನು ಆಯೋಜಿಸಿದ್ದರು. ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಚಿಣ್ಣರ ಸಂತೆಯಲ್ಲಿ ಹಣ್ಣು-ತರಕಾರಿ ಖರೀದಿಸಿದರು.