ಮಡಿಕೇರಿ ಜ. 9: ಅಮ್ಮತ್ತಿಯಲ್ಲಿ ನಿವೃತ್ತ ಸೇನಾಧಿಕಾರಿಗಳ ಅಧೀನದಲ್ಲಿದ್ದ ಸರ್ಕಾರಿ ಜಾಗದ ಒತ್ತುವರಿಯನ್ನು ತೆರವುಗೊಳಿಸಿ ಮೊಕದ್ದಮೆ ಹೂಡಿರುವ ಕ್ರಮವನ್ನು ಖಂಡಿಸಿರುವ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾ. 20 ರಂದು ಮಾಜಿ ಸೈನಿಕರ ಸಂಘ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣ, ದೇಶ ಸೇವೆ ಮಾಡಿದ ಸೈನಿಕರ ವಿರುದ್ಧ ಅಧಿಕಾರಿ ವರ್ಗ ದರ್ಪ ತೋರಿದೆಯೆಂದು ಆರೋಪಿಸಿದರು. ಅತಿಕ್ರಮ ಪ್ರವೇಶವನ್ನು ಪ್ರಶ್ನಿಸಿದಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹೂಡಿರುವ ಅಧಿಕಾರಿಗಳ ಕ್ರಮ ದೌರ್ಜನ್ಯ ರೂಪದ್ದಾಗಿದ್ದು, ಪ್ರಭಾವಿಗಳು ಅತಿಕ್ರಮಣ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸದೆ ನಿವೃತ್ತ ಸೇನಾಧಿಕಾರಿಗಳ ಜಾಗವನ್ನು ದಿಢೀರಾಗಿ ತೆರವುಗೊಳಿಸಿರುವದು ಮಾನವ ಹಕ್ಕುಗಳ ಉಲ್ಲಂಘನೆಂ iÀiÁಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿರುವ ಕಡಂಗ, ಗೋಮಾಳ ಪೈಸಾರಿ ಜಾಗಗಳನ್ನು ಪ್ರಭಾವಿ ವ್ಯಕ್ತಿಗಳು, ಬೃಹತ್ ಕಂಪೆನಿಗಳು ಒತ್ತುವರಿ ಮಾಡಿಕೊಂಡಿ ರುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಇಲ್ಲಿಯವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಮಾಜಿ ಸೈನಿಕರಿಂದ ಲಂಚದ ರೂಪದ ಹಣ ದೊರೆಯುವದಿಲ್ಲ ಎನ್ನುವ ಕಾರಣಕ್ಕಾಗಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿ.ನಾರಾಯಣ ಆರೋಪಿಸಿದರು.

ಮಡಿಕೇರಿ ತಾಲೂಕು ಅಧ್ಯಕ್ಷ ಜಿನ್ನು ನಾಣಯ್ಯ ಮಾತನಾಡಿ, ಈ ಹಿಂದೆ ತಹಶೀಲ್ದಾರರಾಗಿದ್ದ ಕುಂಞಮ್ಮ ಅವರಿಗೆ 2 ಸೆಂಟ್ ಜಾಗ ಮಾತ್ರ ಮಂಜೂರಾಗಿದ್ದು, 8 ಸೆಂಟ್ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಗ್ಗೆ ಸಂಪೂರ್ಣ ದಾಖಲೆ ಇದೆ ಎಂದು ಆರೋಪಿಸಿದರು. ಮೊದಲು ಕುಂಞಮ್ಮ ಅವರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಿ ನಂತರ ಇತರ ಜಾಗವನ್ನು ತೆರವುಗೊಳಿಸಲಿ ಎಂದು ಒತ್ತಾಯಿಸಿದರು.

ರಬ್ಬರ್ ತೋಟಗಳ ಹೆಸರಿನಲ್ಲಿ ಸರ್ಕಾರಿ ಜಾಗ ಖಾಸಗಿ ಕಂಪೆನಿಗಳ ಅಧೀನದಲ್ಲಿದೆ. ಮಡಿಕೇರಿ ನಗರದ ಐಟಿಐ ಹಿಂಭಾಗದಲ್ಲಿ ಸರ್ಕಾರಿ ಜಾಗ ಒತ್ತುವರಿಯಾಗಿ ಮನೆಗಳು ನಿರ್ಮಾಣಗೊಂಡಿವೆ. ಇವುಗಳನ್ನೆಲ್ಲ ತೆರವುಗೊಳಿಸದ ಅಧಿಕಾರಿ ವರ್ಗ, ಮಾಜಿ ಸೈನಿಕರ ವಿರುದ್ಧ ಕ್ರಮ ಕೈಗೊಂಡಿರುವದು ಖಂಡನೀಯ ವೆಂದರು. ಮಾಜಿ ಯೋಧರಿಗೆ ಇಷ್ಟೊಂದು ಅಪಮಾನವಾಗುತ್ತಿದ್ದರೂ ಯಾವದೇ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲವೆಂದು ಜಿನ್ನು ನಾಣಯ್ಯ ಟೀಕಿಸಿದರು.

ಮಹಿಳಾ ಘಟಕದ ರಾಜ್ಯ ಘಟಕದ ರಾಜ್ಯ ಕಾರ್ಯದರ್ಶಿ ಫಾತಿಮಾ ಮಾತನಾಡಿ, ನಗರದ ಸುದರ್ಶನ ಬಡಾವಣೆಯಲ್ಲಿ ಪ್ರಭಾವಿಗಳಿಂದ ಸರ್ಕಾರಿ ಜಾಗ ಒತ್ತುವರಿಯಾಗಿದ್ದು, ಇದರ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆ ಕೈಗೊಳ್ಳದಿದ್ದಲ್ಲಿ ನಮ್ಮ ಸಂಸ್ಥೆಯ ಮೂಲಕವೆ ಸರ್ವೆ ನಡೆಸಬೆÉೀಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ವಿಭಾಗದ ರಾಜ್ಯ ಕಾರ್ಯದರ್ಶಿ ಪಾರ್ವತಿ, ಮಾಧ್ಯಮ ಕಾರ್ಯದರ್ಶಿ ಧರಣಿ ಹಾಗೂ ಸಂಘಟನಾ ಕಾರ್ಯದರ್ಶಿ ಸೂಫಿ ಉಪಸ್ಥಿತರಿದ್ದರು.