ಶ್ರೀಮಂಗಲ, ನ.1: ಟಿಪ್ಪುವಿನಿಂದ ಕೊಡವರ ಹತ್ಯಾಕಾಂಡ ಹಾಗೂ ಮತಾಂತರ ನಡೆದಿಲ್ಲ ಎಂದು ಮಾಜಿ ಸಂಸದ ಅಡಗೂರು ವಿಶ್ವನಾಥ್ ಅವರು ನೀಡಿರುವ ಹೇಳಿಕೆಯನ್ನು ಯುಕೋ ಸಂಘಟನೆ ಸಂಚಾಲಕ ಮಂಜು ಚಿಣ್ಣಪ್ಪ ಖಂಡಿಸಿದ್ದಾರೆ.ಈ ಬಗ್ಗೆ ಲಿಖಿತ ಹೇಳಿಕೆ ನೀಡಿರುವ ಅವರು, ಕೊಡವರಿಗೆ ಮುಂಬಾಗಿಲಿನ ಮೂಲಕ ಬರುವ ಅತಿಥಿಗಳನ್ನು ಸತ್ಕರಿಸುವದು ಗೊತ್ತಿದೆ. ಹಿಂಬಾಗಿಲ ಮೂಲಕ ಬರುವ ಶತ್ರುಗಳನ್ನು ಸದೆ ಬಡೆಯುವ ಕಲೆಯೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದಿರುವ ಅವರು, ಟಿಪ್ಪು ವಿನಿಂದ ನಡೆದಿ ರುವ ಕೊಡವರ ಹತ್ಯಾಕಾಂಡದ ಬಗ್ಗೆ ಅಧ್ಯಯನ ಮಾಡುವ ಅವಶ್ಯಕತೆ ಇಲ್ಲ. ಅದಕ್ಕೆ ಬೇಕಾದಷ್ಟು ಪುರಾವೆ, ಜೀವಂತ ಸಾಕ್ಷಿಗಳಿವೆ. ಅಧ್ಯಯನ ಮಾಡಬೇಕಾಗಿ ರುವದು ಟಿಪ್ಪು ಸ್ವಾತಂತ್ರ್ಯ ಹೋರಾಟ ಗಾರನೇ ಎಂಬ ಬಗ್ಗೆ ಎಂದು ಹೇಳಿದ್ದಾರೆ. 1750ರಲ್ಲಿ ಹುಟ್ಟಿದ ಟಿಪ್ಪು 1799ರಲ್ಲಿ ನಿಧನ ಹೊಂದಿರುತ್ತಾನೆÉ. ಆದರೆ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 ರಲ್ಲಿ ಪ್ರಾರಂಭವಾಗಿರುವಾಗ ಟಿಪ್ಪು ಯಾವ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರನಾಗಿರುತ್ತಾನೆ ಹಾಗೂ ದೇಶಪ್ರೇಮಿ ಎಂದು ಪ್ರಶ್ನಿಸಿದ್ದಾರೆ.
ಅಲ್ಪ ಸಂಖ್ಯಾತ ಕೊಡವರಿಗೆ ಅನ್ಯಾಯವಾಗಿದ್ದರೂ ವಾಸ್ತವಾಂಶ ವನ್ನು ಮರೆಮಾಚಿ ರಾಜಕೀಯ ಲಾಭಕ್ಕಾಗಿ ಒಂದು ಧರ್ಮದವರನ್ನು ಸಂತೋಷ ಗೊಳಿಸಲು ಪ್ರಯತ್ನಿಸುತ್ತಿ ದ್ದಾರೆ. ಕೊಡವರಿಗೆ ಟಿಪ್ಪುವಿನಿಂದ ಆದಂತಹ ದೌರ್ಜನ್ಯ ಬಹುಸಂಖ್ಯಾತ ಸಮುದಾಯಕ್ಕೆ ಆಗಿದ್ದರೆ ಈ ಸರಕಾರ ಅವರ ವಿರೋಧ ಕಟ್ಟಿಕೊಂಡು ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗುತ್ತಿರಲಿಲ್ಲ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಬಲಾಢ್ಯ ಜಾತಿ ಲಾಬಿ ಹೊಂದಿಲ್ಲದ ಅಲ್ಪಸಂಖ್ಯಾತ ಕೊಡವರ ಎಲ್ಲಾ ಹೋರಾಟವನ್ನು ಎಲ್ಲಾ ರಾಜಕೀಯ ಪಕ್ಷ, ಸರಕಾರ ಆಡಳಿತ ವ್ಯವಸ್ಥೆ ದಬ್ಬಾಳಿಕೆ ಮೂಲಕ ಚಿವುಟುತ್ತಾ ಬರುತ್ತಿರುವದು ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.