ವೀರಾಜಪೇಟೆ, ಆ. 3: ಕಳೆದ 10 ದಿನಗಳಿಂದ ತೋರ ಗ್ರಾಮದ ಮನೆಯಿಂದ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಭವ್ಯ (29) ಎಂಬಾಕೆಯ ಮೃತದೇಹ ನಿನ್ನೆ ದಿನ ಸಂಜೆ ಕೆದಮುಳ್ಳೂರು ಗ್ರಾಮದ ಕಾಫಿ ತೋಟದಲ್ಲಿ ಕೊಳೆತು ನಾರುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತ ಭವ್ಯ ಜುಲೈ 22 ರಂದು ಕೆಲಸಕ್ಕೆಂದು ಎಂದಿನಂತೆ ತೆರಳಿದ್ದವಳು ಮನೆಗೆ ಹಿಂತಿರುಗಿ ಬಾರದ್ದರಿಂದ ಆಕೆಯ ಪತಿ ದಿಲೀಪ್ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.